ವಿಜ್ಞಾನ ಗೊಬ್ಬರ:- ಲೀಗೋ vs. ಬಿಗ್ ಬ್ಯಾಂಗ್
'ಸಾಪೇಕ್ಷ ಸಿದ್ಧಾಂತ' (Theory of Relativity) ವಿಜ್ಞಾನದಲ್ಲಿ ಬಹು ಚರ್ಚಿತ ಸಿದ್ಧಾಂತಗಳಲ್ಲಿ ಪ್ರಮುಖವಾದುದು. ಇದು ಮೂಲಭೂತವಾಗಿ ಎರಡು ವಿಭಾಗಗಳಲ್ಲಿ ಪ್ರಕಟಗೊಂಡಿದೆ. ಪ್ರಥಮವಾಗಿ ಐನ್‌ಸ್ಟೈನ್‍ರವರು ೧೯೦೫ರಲ್ಲಿ 'ವಿಶೇಷ ಸಾಪೇಕ್ಷ ಸಿದ್ಧಾಂತ' ಎಂದು ಪ್ರಕಟಿಸಿದರು. ಎರಡನೆಯದಾಗಿ ೧೯೧೫ರಲ್ಲಿ 'ಸಾಮಾನ್ಯ ಸಾಪೇಕ್ಷ ಸಿದ್ಧಾಂತ' ಎಂದು ಪ್ರಕಟಿಸಿದರು. ಸಾಪೇಕ್ಷ ಸಿದ್ಧಾಂತವು ಪ್ರಕೃತಿಯ ಸಕಲ ಘಟನೆಗಳ ಹಿಂದಿನ ಮೂಲಭೂತ ವಿಚಾರಗಳಿಗೆ ಸಮರ್ಪಕ ಉತ್ತರವನ್ನು ನೀಡುತ್ತದೆ ಎಂದು ಅವರ ವಾದ. ಈ ವಿಚಾರಗಳೆಂದರೆ: ಕಾಲ (Time), ಚಲನೆ (Motion), ದ್ರವ್ಯ (Matter), ರಾಶಿ (Mass), ಅವಕಾಶ (Space), ಮತ್ತು ಗುರುತ್ವಶಕ್ತಿ (Gravitational Force). ಇದೇನು ಭಾರತೀಯರಿಗೆ ಹೊಸ ವಿಷಯವಾಗಿರಲಿಲ್ಲ. ನಮ್ಮ ದಾಸವರೇಣ್ಯರು, ಶರಣರು, ಹರಿಕಥಾಕಾರರೂ ಇವನ್ನೆಲ್ಲ ಸರಳ ಸರಾಗವಾಗಿ ವಿವರಿಸುತ್ತಿದ್ದರು.
ಆದರೆ ಆಧುನಿಕ ವಿಜ್ಞಾನದಲ್ಲಿ ಈ ಎಲ್ಲಾ ಮಂಡನೆಗಳು ಬಹಳ ಸುಳ್ಳುಗಳಿಂದಲೇ ಬೆಸೆಯಲ್ಪಟ್ಟಿವೆ ಎಂಬುದು ಸಾಮಾನ್ಯ ಜ್ಞಾನದಿಂದಲೇ (Common Sense) ತಿಳಿದುಬರುತ್ತದೆ. ಮಂಡಿಸಿದ ಸಿದ್ಧಾಂತಕ್ಕೆ ಬದ್ಧವಾಗಿರದೆ, ಬೇಕಾದಾಗ ಬೇಕಾದಂತೆ ಬದಲಾಯಿಸಿಕೊಳ್ಳುತ್ತಾರೆ. ಎಲ್ಲವೂ ಸೇರಿಕೊಂಡಿರುವ ಘನ ಗೋಳವು ಸ್ಫೋಟಗೊಂಡು (Big Bang) ಅದರ ತುಣುಕುಗಳೇ ಬ್ರಹ್ಮಾಂಡದ ಅವಯವಗಳು ಎಂದು ಒಮ್ಮೆ ಹೇಳಿದರು. ಅದಕ್ಕೆ ಬಿಗ್-ಬ್ಯಾಂಗ್ ಪ್ರಯೋಗ ಮಾಡಿ ಸೋತು ಸುಣ್ಣವಾದರು. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಮ್ಮ ಸೋಲನ್ನು ಒಪ್ಪಿಕೊಳ್ಳಲಾಗದೆ, ಪ್ರಪಂಚಕ್ಕೆಲ್ಲ ಸುಳ್ಳನ್ನೇ ಸಾರಿದರು. ಅದನ್ನು ಹಿಂದೆ ಸ್ವಾಮೀಜಿಯವರು ಋತ್ವಿಕ್ ವಾಣಿಯಲ್ಲಿ ಅನಾವರಣ ಮಾಡಿದ್ದರು. ಅದರ ಆಂಗ್ಲ ಅವತರಣಿಕೆಯನ್ನು ವೇದ-ವಿಜ್ಞಾನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ವಿಜ್ಞಾನಿಗಳಿಗೆಲ್ಲ ಸಿಂಹಸ್ವಪ್ನವೋ ಎಂಬಂತೆ ಸಾವಲ್ ಎಸೆಯಲಾಗಿತ್ತು (veda-vijnana.blogspot.in/2011/11/big-bang-opera-neutrino-big-invention.html).
ಈಗಿನ ವಿಜ್ಞಾನವೆಂಬುದೇ ಗೊಬ್ಬರ ಏಕೆಂದರೆ ಅದು ಬಂಡವಾಳಶಾಹಿ ವಿಜ್ಞಾನ. ಇಷ್ಟು ಬಂಡವಾಳ ಹೂಡಿಕೆ ಮಾಡಿದರೆ ಇಷ್ಟು ಲಾಭ ಬರಬೇಕು ಎನ್ನುವುದು ಮಾತ್ರ ಅವರ ಧ್ಯೇಯ.ವಿಜ್ಞಾನಿಗಳಿಗೆ ಯಾವಾಗಲೂ ತಮಗೆ ಬಂದಿರುವ ಅನುದಾನ ಹಾಗೂ ಪ್ರತಿಷ್ಠೆಯು ನಷ್ಟವಾಗುತ್ತದೆ ಎಂಬ ಭಯ. ಇನ್ನು ಭಾರತದಲ್ಲಿ ಮಾಡುತ್ತಿದ್ದ ವೈಧಿಕ ಭೌತಶಾಸ್ತ್ರದ ಪಾಠದ ಕೃಷ್ಣಗರ್ಭದ ಯಾವುದೋ ಒಂದು ವಿಚಾರವನ್ನು ಕೇಳಿಸಿಕೊಂಡು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೆ, ಗಣಿತದ ತಪ್ಪುಗಳಿಂದ ಬಂದು ಸೇರಿರುವ ಸಿದ್ಧಾಂತವೇ Theory of Black Holes. ಇದು ಶುದ್ಧ ಸುಳ್ಳೆಂದು ಹಲವಾರು ವೈಜ್ಞಾನಿಕರೇ ಹೇಳಿದ್ದಾರೆ. ಈಗಿನ ವಿಜ್ಞಾನವೂ ನಮ್ಮ ರಾಜಕೀಯ ಪಕ್ಷಗಳಂತೆಯೇ ಆಗಿದೆ. ಗೆದ್ದೆತ್ತಿನ ಬಾಲ ಹಿಡಿಯುವವರೇ ಹೆಚ್ಚು. ಇತ್ತೀಚೆಗೆ LIGO ಎಂಬ ಪ್ರಯೋಗದಿಂದ ನೂರು ವರ್ಷದ ಹಿಂದಿನ ಐನ್‌ಸ್ಟೈನ್ ಹೇಳಿದ ಗುರುತ್ವಾಕರ್ಷಣ ಅಲೆಗಳನ್ನು (Gravitational Waves) ಪ್ರಮಾಣೀಕರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅದು ಶತ: ಪ್ರತಿಶತ ಸುಳ್ಳು. ಅವರ ಪ್ರಕಾರ ೧.೩ ಬಿಲಿಯನ್ ವರ್ಷದ ಹಿಂದೆ ಎರಡು ಕೃಷ್ಣಗರ್ಭಗಳ (Black Hole) ಸಂಯೋಜನೆಯ ಕಾಲದಲ್ಲಿ ಹೊರಟ ಗುರುತ್ವ ಅಲೆಯನ್ನು ಇವರ ಲೀಗೋ ಉಪಕರಣವು ಸೆಪ್ಟೆಂಬರ್ ೧೪, ೨೦೧೫ರಂದು ಆಲಿಸಿತಂತೆ. ಚೋದ್ಯವೆಂದರೆ ಅದು ಅವರಿಗೂ ಅರ್ಥವಾಗಿಲ್ಲ. ಇನ್ನು ಹತ್ತಾರು ವರ್ಷಗಳಿಂದ ಬಂದಿರುವ ಅನುದಾನವು ಹಿಂತಿರುಗಿಸುವ ಹಂತಕ್ಕೆ ತಲುಪಿದ ಕಾರಣ ತರಾತುರಿಯಲ್ಲಿ ಸಂಶೋಧನೆಯನ್ನು ಉಳಿಸಿಕೊಳ್ಳಲು ಏನೇನೋ ಹೇಳುವುದರೊಂದಿಗೆ ಕಂಪ್ಯೂಟರ್ ಅನಿಮೇಷನ್ ತೋರಿಸಿ ಎಲ್ಲರಿಗೂ ಮೋಸ ಮಾಡಿದ್ದಾರೆ. ಅದಕ್ಕೆ ನಾವು ತೀವ್ರವಾಗಿ ಖಂಡಿಸಿದ್ದೇವೆ (veda-vijnana.blogspot.in/2016/02/ligos-discovery-is-fallacy.html)
ವಿಜ್ಞಾನಿಗಳೇ ಹೇಳುವಂತೆ ಕೃಷ್ಣಗರ್ಭವು ಎಲ್ಲವನ್ನೂ ಹೀರುತ್ತದೆ, ಯಾವುದನ್ನೂ ಹೊರ ಹೋಗಲು ಬಿಡುವುದಿಲ್ಲ. ಹಾಗಿದ್ದಾಗ ಎರಡು ಕೃಷ್ಣಗರ್ಭಗಳು ಒಗ್ಗೂಡುವಾಗ ಅದರಿಂದ ಗುರುತ್ವ ಅಲೆಯು ಹೇಗೆ ಹೊರಡಲು ಸಾಧ್ಯ? ಇನ್ನು ೧.೩ ಬಿಲಿಯನ್ ವರ್ಷಗಳ ಹಿಂದಕ್ಕೆ ಹೋಗಿ ಅದನ್ನು ದಾಖಲಿಸಿದವರು ಯಾರು? ಆ ರೀತಿಯಾದರೆ, ದಾಖಲಿಸಿದ ವಿಧಾನ ಹೇಗೆ? ಪ್ರತ್ಯಕ್ಷವೇ ಪ್ರಮಾಣವೆಂದು ಬೊಗಳುವ ಅರೆವಿಜ್ಞಾನಿಗಳು, ಯೋಗ್ಯತೆ ಇದ್ದರೆ ಒಂದೇ ಒಂದು ಕೃಷ್ಣಗರ್ಭವನ್ನು ತೋರಿಸಿಕೊಡಲಿ. ಅದನ್ನು ಇಲ್ಲಿಯವರೆಗೆ ಅವರು ನೋಡಿಯೇ ಇಲ್ಲ.
ಬಿಗ್ ಬ್ಯಾಂಗ್ ಹಾಗೂ ಲೀಗೋ ಪ್ರಯೋಗಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ. ಬಿಗ್ ಬ್ಯಾಂಗ್ ಪ್ರಕಾರ ಒಂದು ಘನ ರಾಶಿಯಲಿ ಅಣುವಿನ ವಿದಳನದಿಂದ ಕಾಯಗಳ ಉಗಮ ಎನ್ನುತ್ತಾರೆ. ಅದೇ ಲೀಗೋ ಪ್ರಯೋಗವು ಕೃಷ್ಣಗರ್ಭಗಳ ಸಂಯೋಜನೆಯನ್ನು ಹೇಳುತ್ತಿದೆ. ಎರಡರಲ್ಲಿ ಒಂದು ಸುಳ್ಳಾಗಲೇಬೇಕು. ಇಲ್ಲವಾದರೆ ಎರಡೂ ಸುಳ್ಳು ಎಂದಾಗುತ್ತದೆ.
ವೇದಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಬಂದನಮ್ಮ ಪುರಾಣಗಳಲ್ಲಿ ಸೃಷ್ಟಿಯ ರಹಸ್ಯವನ್ನು ಸ್ಪಷ್ಟವಾಗಿಯೇ ವಿವರಿಸಲಾಗಿದೆ. ಅದನ್ನೂ ಎಷ್ಟೆಷ್ಟೋ ವಿಜ್ಞಾನಿಗಳು ಓದಿದ್ದಾರೆ. ಅದನ್ನೇ ತಮ್ಮ ಸಂಶೋಧನೆಗೆ ಆಧಾರವಾಗಿ ತೆಗೆದುಕೊಂಡ್ಡಿದ್ದಾಗ್ಯೂ ಆಧಾರವನ್ನು ಉಲ್ಲೇಖಿಸಲಿಲ್ಲ. ಇದನ್ನು ಕನ್ನಡದಲ್ಲಿ ಕೃತಿಚೌರ್ಯ ಎನ್ನುತ್ತಾರೆ. ಆದರೆ ಕಳ್ಳತನ ಮಾಡಿದಾಗ ಅದರ ಕುರುಹುಗಳನ್ನು ಬಿಟ್ಟಿಯೇ ಇರುತ್ತಾರೆ ಎಂಬ ಆಧಾರದಲ್ಲಿ ಅಲ್ಲಲ್ಲಿ ಕೆಲವಾರು ಭಾಷಣಗಳಲ್ಲಿ, ಲೇಖನಗಳಲ್ಲಿ ಪ್ರತಿಷ್ಟಿತ ವಿಜ್ಞಾನಿಗಳು ಬಾಯ್ತಪ್ಪಿಯೋ, ಭಾವನಾತ್ಮಕವಾಗಿಯೋ ಘೋಷಿಸಿದ್ದಾರೆ.
ವಿಜ್ಞಾನದ ಕೆಲವಾರು ಪಾರಿಭಾಷಿಕಗಳನ್ನು ಹೇಗೆ ಸರಳವಾಗಿ ಕನ್ನಡ ಕವಿಶ್ರೇಷ್ಠರು ವರ್ಣಿಸಿದ್ದಾರೆ ಎಂದು ಓದಿ ಆನಂದಿಸೋಣ.
ಕಾಲ:- ಐನ್‌ಸ್ಟೀನಿಗೆ ಕಾಲ ಎಂದರೆ ಏನೆಂದೇ ತಿಳಿದಿರಲಿಲ್ಲ. ತಮ್ಮ ಕೈಗಡಿಯಾರದ ಲೆಕ್ಕಕ್ಕೆ ತಕ್ಕಂತೆ ಕಾಲವು ಕುಣಿಯುತ್ತದೆ ಎಂದು ಭ್ರಮೆಯಲ್ಲಿದ್ದಾರೆ. ಅಥರ್ವವೇದ, ತಂತ್ರಶಾಸ್ತ್ರ ಹಾಗೂ ಸಿದ್ಧಾಂತ ಗಣಿತಗಳು ಕಾಲವನ್ನು ಸ್ಪಷ್ಟವಾಗಿ ವಿವರಿಸಿವೆ. ಇನ್ನು ಕನಕದಾಸರು ಒಂದು ಮುಂಡಿಗೆಯಲ್ಲಿ ಬಹು ಸರಳವಾಗಿ ಕಾಲವನ್ನು ವಿವರಿಸಿದ್ದಾರೆ ನೋಡಿ:
ಹಲವು ಜೀವನವ ಒಂದೆಲೆ ನುಂಗಿತು | ಕಾಗಿ
ನೆಲೆಯಾದಿ ಕೇಶವನು ಬಲ್ಲನೀ ಬೆಡಗ || ಪ ||
ಹರಿಯ ನುಂಗಿತು, ಪರಬ್ರಹ್ಮರ ನುಂಗಿತು
ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ
ಹರಿಯ ಬಳಗವ ಒಂದೆಲೆ ನುಂಗಿತು || ೧ ||
ಎಂಟು ಗಜವನು ನುಂಗಿ, ಕಂಟಕರೈವರ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು || ೨ ||
ಗಿಡವ ನುಂಗಿತು ಗಿಡದೊಡತೊಟ್ಟ ನುಂಗಿತು
ಗಿಡದ ತಾಯಿ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ
ನೊಡೆಯಾದಿ ಕೇಶವ ಬಲ್ಲನೀ ಬೆಡಗ || ೩ ||
ಇನ್ನೊಂದು ಮುಂಡಿಗೆಯ ಚರಣದಲ್ಲಿ ಕಾಲನ, ಕಾಲಿನ, ಕಾಲಿ(ಳಿ)ಯ ವರ್ಣನೆ ಅರ್ಥಮಾಡಿಕೊಳ್ಳಿ:
ಕಾಲಿಲ್ಲದೆಲೆ ಆಡುತ್ತ | ವೇದ ತಂದಿತ್ತ
ಕಾಲಿಲ್ಲದವನ ಪೊತ್ತ | ಅಮೃತ ತಂದಿತ್ತ
ಕಾಲತೂಗಿ ನೋಡುತ್ತ | ಗಜ ಉನ್ಮತ್ತ ||
ಕಾಲಿನಿಂದಲಿ ಕೊಲುವ ರೂಪದಿ
ಕಾಲಿನಲಿ ರಿಪುವನ್ನು ಸೀಳಿದ
ಕಾಲಿನಲಿ ತಾನಳೆದ ಮೇದಿನಿ
ಕಾಲಿನಲಿ ತಾ ನಡೆದ ಭಾರ್ಗವ
ಕಾಲಿನಲಿ ವನವಾದ ಪೋದನ
ಕಾಲಿನಲಿ ಕಾಳಿಯನ ತುಳಿದನ
ಕಾಲಿನಲಿ ತ್ರಿಪುರರನು ಗೆಲಿದನ
ಕಾಲಿಗೆರಗುವೆ ತೇಜಿ ರೂಢನ ||
ಚಲನೆ:-ಪ್ರಪಂಚದಲ್ಲಿ ಎಲ್ಲವೂ ಚಲನಶೀಲವಾಗಿಯೇ ಇದೆ. ಬಾಹ್ಯದಲ್ಲಿ ಸ್ಥಿರವೆಂಬಂತೆ ಕಂಡರೂ ಆಂತರಿಕವಾಗಿ ಚಲನೆ ಇದ್ದೇ ಇರುತ್ತದೆ. ಅಂತಹಾ ಚಲನೆಯಾರಂಭವನ್ನು ಗುರುತಿಸಿದ್ದನ್ನೇ ಮೊದಲ ವೈಜ್ಞಾನಿಕತೆ ಎಂದರು. ಇದರ ಬಗ್ಗೆ ದಾಸರು ಹಾಗೂ ವಚನಕಾರರು ಏನು ಹೇಳಿದ್ದಾರೆ ನೋಡೋಣ:
ವೆಂಕಟಾ"ಚಲನೆ"ಬಾರೊ, ಶಂಕರಾಭರಣ ಶಾಯಿ ||
ಎಂದರು ವಿಜಯದಾಸರು
ಹರಿವಾಯುಗಳು
ಮೂರಕ್ಕರದ ದೇವ ಮೂರು ವಸ್ತುವ ಬೆರೆಸಿ
ಮೂರು ಮೂರಾಗಿಸಿಯೆ ಪಾಲಿಸುವ ನಮ್ಮ
ಎರಡು ವಸ್ತುವು ಸೇರಿ ದೇಹಕೆ ಚಲನೆಯದು
ಹರಿವಾಯುಗಳ ಒಲುಮೆ ದೇಹ ರಕ್ಷಕವು ||
ಎಂದರು ನಿಡಂಬೂರು ರಾಮದಾಸರು.
ನಾವು ಪ್ರಾಪಂಚಿಕವಾಗಿ ಗುರುತಿಸುವ ಚಲನೆ ಎಷ್ಟು ಕ್ಷುಲ್ಲಕ್ಕವೆಂದು ಸಿದ್ಧಾರಾಮೇಶ್ವರರ ವಚನದಲ್ಲಿ ನೋಡಿರಿ:
ಜಲದಲ್ಲಿಯ ಚಂದ್ರನ ಚಲನೆ ಜಲದಲ್ಲಲ್ಲದೆ,
ಘಟದಲ್ಲಿಯ ಪ್ರತಿಬಿಂಬಗಳು ಘಟದಲ್ಲಲ್ಲದೆ ಬಿಂಬದಲ್ಲಿಲ್ಲ ನೋಡಯ್ಯಾ,
ಜಲದಲ್ಲಿಯ ಚಂದ್ರನ ಚಲನೆ ಘಟದಲ್ಲಿಯ ಪ್ರತಿಬಿಂಬ
ನಿಜವಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ ||
ಜಡ-ಚೇತನ ಎಂದು ದಾಸರು, ಸ್ಥಾವರ-ಜಂಗಮವೆಂದು ವಚನಕಾರರು ಇದನ್ನು ಚೆನ್ನಾಗಿ ವರ್ಣಿಸಿದ್ದಾರೆ:
ಸ್ಥಾವರ ಜಂಗಮವೆಂದೆಂಬಿರಿ
ಸ್ಥಾವರವು ನಿಃಶಬ್ದ, ಜಂಗಮವು ಮಂತ್ರಶಬ್ದ,
ಒಂದೆಂದಾಗದಯ್ಯ, ಒಂದಾಗಲರಿಯದು.
ತಿಳಿದರೆ ಒಂದು, ತಿಳಿಯದಿದ್ದರೆ ಎರಡು,
ಅದೇನು ಕಾರಣವೆಂದರೆ-
ಸ್ಥಾವರವಾವುದು ಜಂಗಮವಾವುದು ತಿಳಿಯದ ಕಾರಣ.
ಸ್ಥಾವರವೇ ಇಷ್ಟಲಿಂಗ, ಜಂಗಮವೇ ಪ್ರಾಣಲಿಂಗ.
ಅಂತಪ್ಪ ಪ್ರಾಣಲಿಂಗವನೇ
ಶ್ರೀಗುರು ಬಹಿಷ್ಕರಿಸಿ ಕರಸ್ಥಲಕ್ಕೆ
ಇಷ್ಟಬ್ರಹ್ಮವ ಮಾಡಿಕೊಟ್ಟನೆಂದು ತಿಳಿಯಬಲ್ಲರೆ
ಸ್ಥಾವರ ಜಂಗಮ ಒಂದೇ.
ಈ ನಿರ್ಣಯವ ತಿಳಿಯದಿದ್ದರೆ ಸ್ಥಾವರ ಜಂಗಮ ಒಂದೇ ಅಲ್ಲವು.
ಉಭಯದ ಭೇದವ ನಿಮ್ಮ ಶರಣರೇ ಬಲ್ಲರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ಕಾಡಸಿದ್ಧೇಶ್ವರ
ದ್ರವ್ಯ, ರಾಶಿ, ಅವಕಾಶ:-ಈಮೂರನ್ನೂಒಂದೇ ಪದ್ಯದಲ್ಲಿ ಚಿದಾನಂದ ಅವಧೂತರು ವರ್ಣಿಸಿದ್ದಾರೆ:
ತುಂಬಿಕೊಂಡಿರುತಿಹನೊಬ್ಬ ಜಗವಿಂಬಿಲ್ಲದೆಲ್ಲವ ಸಕಲವೆಲ್ಲವತುಂಬಿಪ ಆರರೊಳಗೆತುಂಬಿ ಅತ್ತತ್ತಲುತುಂಬಿ ಮೂರುಠಾವಲಿತುಂಬಿ ಮೂರುಮನೆತುಂಬಿ ಬೇರೆಮೇಲಕೆತುಂಬಿ ಬೆಳಗಿನೊಳ್ಗೆತುಂಬಿ ಸಾರಾಮೃತದಿತುಂಬಿ ಸಾಕ್ಷಾತ್ಕಾರದಲಿತುಂಬಿ ||
ಮನಸಿನೊಳಗೆತುಂಬಿ ಮನವರ್ತನದಿತುಂಬಿ ತನುವಿನಲ್ಲಿಯೆತುಂಬಿ ಸರ್ವಾಯವತುಂಬಿ ತನುತ್ರಯದಲಿತುಂಬಿ ತನುವಿನಲ್ಲಿಯೆತುಂಬಿ ಘನಸುಖದಿತುಂಬಿ ||
ಇಳೆಯಒಳಗೆತುಂಬಿ ಇಹಜಂಗಮದಿತುಂಬಿ ಬಲುಸ್ಥಾವರದಿತುಂಬಿ ಬಯಲಿನಲ್ಲಿಯೆತುಂಬಿ ಕೆಳಗೆ ನಡುವೆತುಂಬಿ ಕೇವಲಕೊನೆಯತುಂಬಿ ಚಲಿಸದಂದದಿತುಂಬಿ ಚಿದಾನಂತನೇತುಂಬಿ ||
ಗುರುತ್ವ:- ಗುರುವಿನಿಂದ ಗುರುತ್ವ ಎಂದು ಶರಣರು ಸಾರಿದ್ದಾರೆ. ವೈಧಿಕಭೌತಶಾಸ್ತ್ರವೂ ಭೂಮ್ಯಂತರ್ಗತ ಗುರುವಜ್ರದ ನಿಕ್ಷೇಪವೇ ಗುರುತ್ವಾಕರ್ಷಣಾ ಶಕ್ತಿಗೆ ಕಾರಣ.
ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ, ಲಿಂಗದಿಂದ ಶಿಷ್ಯ,
ಶಿಷ್ಯನಿಂದ ಗುರು, ಗುರುವಿನಿಂದ ಗುರುತ್ವ,
ಗುರುತ್ವದಿಂದ ಸಕಲವೈಭವಂಗಳ ಸುಖ,
ಈ ಗುಣ ಅವರೋಹಾರೋಹಾಗಿ ಬಂದು,
ಆ ವಸ್ತು ವಸ್ತುಕವಾಗಿ ಬಂದುದನರಿದು
ಪಿಂಡಜ್ಞಾನಸ್ಥಲವ ಕಂಡು
ರತ್ನ ರತ್ನ ಕೂಡಿದಂತೆ, ರತಿ ರತಿ ಬೆರಸಿದಂತೆ,
ಸುಖ ಸುಖವನಾಧರಿಸಿದಂತೆ, ಬೆಳಗು ಬೆಳಗಿಂಗೆ ಇದಿರಿಟ್ಟಂತೆ,
ಅಂಡ ಪಿಂಡ ಜ್ಞಾನ ತ್ರಿವಿಧ ನೀನಲಾ,
ಸದ್ಯೋಜಾತಲಿಂಗದ ಲೀಲಾಭಾವ.
ಅವಸರದ ರೇಕಣ್ಣ
ಸದ್ಯೋಜಾತ ಎಂದರೆ ಭೌತಶಾಸ್ತ್ರದ ಅಗೋಚರ ಎಂಬ ಮಹಾಭಾಗದಲ್ಲಿ ಇದರ ವಿವರಣೆ ಸಿಗುತ್ತದೆ.
ಕೃಷ್ಣಗರ್ಭ:-ವೇದದಲ್ಲಿ ಸ್ಪಷ್ಟವಾದ ವಿವರಣೆ ಇದೆ. ಇನ್ನು ಕಾವ್ಯದಲ್ಲಿ ಹೆಚ್ಚಿನ ಕಡೆ ಕೃಷ್ಣನೆಂದೋ ಅಥವಾ ಗರ್ಭವೆಂದೋ ಪ್ರತ್ಯೇಕವಾಗಿ ವಿವರಿಸಲಾಗಿರುತ್ತದೆ. ಇವೆಲ್ಲವನ್ನೂ ಸಮೀಕರಿಸಿ ವಿವರಿಸುವ ಬಾಲಸಂಗಯ್ಯ ಅಪ್ರಮಾಣ ದೇವ ಎಂಬ ವಚನಕಾರರ ಘನವಾದ ವಚನದೊಂದಿಗೆ ಈ ಲೇಖನ ಮುಗಿಸುತ್ತೇನೆ:
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ
ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ,
ಅಂಗ-ಪ್ರತ್ಯಂಗ ಸ್ವರೂಪ ಸ್ವಭಾವಗಳೆಂತೆಂದಡೆ;
ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ,
ಮಹಾಘನವಾಗಿಹಪ್ರಣವವೆ
ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ,
ದಿವ್ಯಾನಂದಪ್ರಣವ ದಿವ್ಯಜ್ಞಾನಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಚಕ್ಷು,
ನಿರಾಕಾರಪ್ರಣವ, ನಿರಾಳಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಪರ್ಬು,
ಅಚಲಾತೀತಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ,
ಸಹಜ ನಿರಾಲಂಬಪ್ರಣವವೆ
ಆ ಅಖಂಡ ಮೂಲಸ್ವಾಮಿಯ ನಾಸಿಕ,
ನಿರಾಲಂಬಾತೀತಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಗಳು ನೋಡಾ,
ನಿರಾಮಯಪ್ರಣವ ನಿರಾಮಯಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ,
ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ,
ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯಗಡ್ಡ ಮೀಸೆ ಕೋರೆದಾಡೆ ನೋಡಾ,
ನಾದ ಬಿಂದು ಕಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯತಾಳೋಷ್ಟ ಸಂಪುಟ ನೋಡಾ,
ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ,
ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ,
ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ
ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ,
ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ,
ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ,
ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ
ಆ ಅಖಂಡ ಮಹಾಮೂಲಸ್ವಾಮಿಯಷೋಡಶದಂತಂಗಳು ನೋಡಾ.
ಆ ಒಂದೊಂದು ದಂತಂಗಳ ಕಾಂತಿಯೆ
ಅನಂತಕೋಟಿ ಸಿಡಿಲೊಡೆದ ಬಯಲುಪ್ರಕಾಶವಾಗಿಹುದು ನೋಡಾ.
ಕುಳವಿಲ್ಲದ ನಿರಾಕುಳಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯಕೊರಳು.
ಅಪ್ರಮಾಣ ಅಗೋಚರಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ,
ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ,
ಶಿವಜ್ಯೋತಿಪ್ರಣವ, ಅಚಲಪ್ರಣವ, ಅಚಲಾನಂದಪ್ರಣವಂಗಳೆ
ಆ ಅಖಂಡ ಮಹಾಮೂಲಸ್ವಾಮಿಯಹಸ್ತಾಂಗುಲಿ ನಖಂಗಳು ನೋಡಾ.
ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯಎದೆ.
ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ.
ನಿರುಪಮಪ್ರಣವ, ನಿರುಪಮಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯದಕ್ಷಿಣ-ವಾಮ ಪಾರ್ಶ್ವಂಗಳು.
ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯಬೆನ್ನು.
ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ
ಬೆನ್ನಿನೆಲವು ನೋಡಾ.
ಪಂಚಸಂಜ್ಞೆಯನುಳ್ಳ ಅಖಂಡಗೋಳಾಕಾರಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ"ಗರ್ಭ" ನೋಡಾ.
ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ
ಪ್ರಕಾಶವಾಗಿಹುದು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು,
ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು,
ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ
ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು,
ಅನೇಕಕೋಟಿ ಆದಿಪಾಶಂಗಳೆಂಬ
ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು,
ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್‌ಪದ,
ಅನೇಕಕೋಟಿ ಅನಾದಿ ತ್ವಂಪದ,
ಅನೇಕಕೋಟಿ ಅನಾದಿ ಅಸಿಪದಂಗಳೆಂಬ
ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್‍ಪದ,
ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ
ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಗಳು,
ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ
ವೇದಾಂತ ಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು,
ಅನೇಕಕೋಟಿ ಅನಾದಿ ಈಶ್ವರರು,
ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು,
ಅನೇಕಕೋಟಿ ಅನಾದಿ ಈಶ್ವರರು,
ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು,
ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು,
ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು,
ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು
ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು,
ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು,
ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು
ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು,
ಅನೇಕಕೋಟಿ ದೇವರ್ಕಳು, ಅನೇಕಕೋಟಿ
ಆದಿದೇವರ್ಕಳಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಗಳು,
ಅನೇಕಕೋಟಿ ಮಹಾಬ್ರಹ್ಮಾಂಡಗಳು,
ಅನೇಕಕೋಟಿ ಆದಿಬ್ರಹ್ಮಾಂಡಂಗಳು ಅಡಗಿಹವು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ನಡುವೇ
ವ್ಯೋಮಾತೀತಪ್ರಣವವು.
ಆ ಅಖಂಡ ಮಹಾಮೂಲಸ್ವಾಮಿಯಕಟಿಸ್ಥಾನವೇ
ಚಿತ್ಕಲಾತೀತಪ್ರಾಣವ.
ಆ ಅಖಂಡ ಮಹಾಮೂಲಸ್ವಾಮಿಯಪಚ್ಚಳವೇ
ಅನಾದಿಪ್ರಣವ ಆದಿಪ್ರಣವ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯಉಪಸ್ಥವೇ
ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ
ಮೊದಲಾದ ಅನೇಕಕೋಟಿ ದೇವರ್ಕಳಿಗೂ
ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ.
ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯಒಳದೊಡೆ ನೋಡಾ.
ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯಒಳಪಾದ ಕಂಭಂಗಳು ನೋಡಾ.
ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯಹರಡು ನೋಡಾ,
ಓಂಕಾರಪ್ರಣವ ಮಹದೋಂಕಾರಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ.
ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ
ಪ್ರಣವದತ್ತತ್ತ ಸ್ಥಾನಂಗಳೇ
ಆ ಅಖಂಡ ಮಹಾಮೂಲಸ್ವಾಮಿಯಪಾದಾಂಗುಲಿಗಳು ನೋಡಾ.
ಆ ಓಂಕಾರಪ್ರಣವದ ಮಹದೋಂಕಾರಪ್ರಣವದ
ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ
ಪಾದಾಂಗುಷ್ಠಾಂಗುಲಿಗಳು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯಸರವೇ ಪರಾತೀತಪ್ರಣವ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯಮಾತೇ
ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ
ಅತಿಮಹಾಜ್ಯೋತಿಪ್ರಣವ ನೋಡಾ.
ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯವಪೆ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯಲ್ಲಿ
ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ
ಆ ನಿರಾಳಸ್ವಯಂಭುಲಿಂಗಂಗಳೇ
ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ.
ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ.
ಅನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ
ಅಪ್ರಮಾಣಕೂಡಲಸಂಗಮದೇವಾ.

Comments
Post a Comment