Skip to main content

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 1 ||

ಬ್ರಹ್ಮ , ವಿಷ್ಣು ಹಾಗೂ ದೇವಗಣಗಳಿಂದ ಯಾವಾಗಲೂ ಪೂಜಿಸಲ್ಪಡುವ , ಪರಮಪವಿತ್ರ ,
ನಿರ್ಮಲವಾಗಿರುವ ,ಎಲ್ಲಾ ಜೀವಿಗಳ ಮನೋಭಿಲಾಷೆಗಳನ್ನು ಪೂರೈಸುವ , ಜನ್ಮ ,
ಮೃತ್ಯುಗಳೆಂಬ ದುಃಖದಿಂದ ವಿಮೋಚನೆಗೊಳಿಸುವ ಯಾವಾಗಲೂ ಒಳ್ಳೆಯದನ್ನೇ ಮಾಡುವ
ಶಿವಲಿಂಗಕ್ಕೆ ನನ್ನ ನಮಸ್ಕಾರಗಳು.

ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಮ್ |
ರಾವಣ ದರ್ಪ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 2 ||

ಯಾವಾಗಲೂ ದೇವಗಣಗಳಿಂದ , ಮುನಿಗಳಿಂದ ಅರ್ಚಿಸಲ್ಪಡುವ , ಕಾಮವನ್ನು
(ವಿಷಯಾಸಕ್ತಿಗಳನ್ನು) ನಾಶಪಡಿಸುವ , ಕರುಣೆಯನ್ನು ಹೊಂದಿರುವ , ರಾವಣನ ಅಹಂಕಾರವನ್ನು
ನಾಶಪಡಿಸಿರುವ , ಸದಾಶಿವ ಲಿಂಗಕ್ಕೆ ನನ್ನ ನಮಸ್ಕಾರಗಳು.

ಸರ್ವ ಸುಗಂಧ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಮ್ |
ಸಿದ್ಧ ಸುರಾಸುರ ವಂದಿತ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 3 ||

ಸರ್ವ ಸುಗಂಧದಿಂದ ಸುಲೇಪಿತವಾಗಿರುವ , ಬುದ್ಧಿ ಹಾಗೂ ಆತ್ಮಜ್ಞಾನವನ್ನು ವರ್ಧಿಸುವ ,
ಸಿದ್ಧಯೋಗಿಗಳಿಂದ , ದೇವತೆಗಳಿಂದ , ಅಸುರರಿಂದ ಯಾವಾಗಲೂ ವಂದಿಸಲ್ಪಡುವ
ಸದಾಶಿವಲಿಂಗಕ್ಕೆ ನನ್ನ ನಮಸ್ಕಾರಗಳು.

ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿ ವೇಷ್ಟಿತ ಶೋಭಿತ ಲಿಂಗಮ್ |
ದಕ್ಷ ಸುಯಜ್ಞ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 4 ||

ಕನಕ ಮಹಾಮಣಿಯಿಂದ ಅಲಂಕೃತವಾಗಿರುವ , ಹಾವುಗಳಿಂದ ಸುತ್ತುವರಿದಿರುವ , ದಕ್ಷನ
ಮಹಾಯಜ್ಞವನ್ನು ನಾಶಪಡಿಸಿರುವ ಸದಾಶಿವ ಲಿಂಗಕ್ಕೆ ನನ್ನ ನಮನಗಳು.

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಮ್ |
ಸಂಚಿತ ಪಾಪ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 5 ||

ಕುಂಕುಮ ಹಾಗೂ ಚಂದನಗಳಿಂದ ಲೇಪಿತವಾಗಿರುವ , ಕಮಲದ ಹಾರದಿಂದ ಶೋಭಿಸುತ್ತಿರುವ ,
ಎಲ್ಲಾ ಪಾಪಗಳನ್ನೂ ನಾಶಪಡಿಸುವ ಸದಾಶಿವನ ಲಿಂಗಕ್ಕೆ ನನ್ನ ನಮನಗಳು.

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈ-ರ್ಭಕ್ತಿಭಿರೇವ ಚ ಲಿಂಗಮ್ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 6 ||

ದೇವಗಣಗಳಿಂದ ಅರ್ಚಿಸಲ್ಪಡುತ್ತಿರುವ . ಭಕ್ತಿಭಾವದಿಂದ ಪರಿಪೂರ್ಣವಾಗಿ

ಪೂಜಿಸಲ್ಪಡುವ,

ಕೋಟಿ ಸೂರ್ಯರ ಪ್ರಭೆಗೆ ಸಮಾನವಾಗಿರುವ ಸದಾಶಿವನ ಲಿಂಗಕ್ಕೆ ನಾನು

ನಮಸ್ಕರಿಸುತ್ತೇನೆ.

ಅಷ್ಟದಲೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಮ್ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 7 ||

ಅಷ್ಟದಳಗಳಿರುವ ಪುಷ್ಪಗಳಿಂದ ವಿರಾಜಿಸುತ್ತಿರುವ , ಪ್ರಪಂಚದ ಎಲ್ಲಾ ವಸ್ತುಗಳ
ಉತ್ಪತ್ತಿಗೆ ಕಾರಣವಾಗಿರುವ , ಅಷ್ಟ ದರಿದ್ರತೆಗಳನ್ನು ನಾಶಪಡಿಸುವ ಸದಾಶಿವನ
ಲಿಂಗಕ್ಕೆ ನನ್ನ ಪ್ರಣಾಮಗಳು.

ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್ |
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 8 ||

ಸುರಗುರುಗಳಿಂದ , ಸರ್ವಶ್ರೇಷ್ಟ ದೇವರುಗಳಿಂದ ಪೂಜಿಸಲ್ಪಡುವ , ಸುರವನದ ಪುಷ್ಪಗಳಿಂದ
ಅರ್ಚಿಸಲ್ಪಡುವ , ಆದಿ , ಅಂತ್ಯಗಳಿಲ್ಲದ ಪರಬ್ರಹ್ಮಸ್ವರೂಪಿ ಸದಾಶಿವನ ಲಿಂಗಕ್ಕೆ
ನನ್ನ ನಮಸ್ಕಾರಗಳು.

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಶಿವಲಿಂಗದ ಸನ್ನಿಧಿಯಲ್ಲಿ ಯಾರು ಈ ಲಿಂಗಾಷ್ಟಕವನ್ನು ಭಕ್ತಿಯಿಂದ ಪಠಿಸುತ್ತಾರೋ ,
ಅವರು ಸಾಕ್ಷಾತ್ ಶಿವಲೋಕವನ್ನು ಸೇರುತ್ತಾರೆ..ಈಶ್ವರ ಅವರ ಮನೋಕಾಮನೆಗಳನ್ನು
ಈಡೇರಿಸುತ್ತಾನೆ.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...