Skip to main content

ಪಟೇಲ್ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಮೋದಿ ಹೇಳಿದ್ದು ಸುಮ್ಮನೆ ಅಲ್ಲ !    ✍ಪ್ರತಾಪ್ ಸಿಂಹ

ರಾಷ್ಟ್ರಪತಿಯವರ ಅಭಿಭಾಷಣದ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಲು ಈಗ್ಗೆ ಕೆಲದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ನೀಡಲು ನಿಂತಿದ್ದರು, ಅದಕ್ಕೂ ಮೊದಲು ಪ್ರಧಾನಿಯಾದ ನಂತರ ಪ್ರಜಾತಂತ್ರವೇ ಕಗ್ಗೊಲೆಯಾಗಿದೆ ಏನೋ ಎಂಬಂತೆ ಕಾಂಗ್ರೆಸ್ಸಿಗರು ಬೊಬ್ಬೆ ಹಾಕಿದ್ದರು. ಸಾತ್ವಿಕ ಸಿಟ್ಟಿನೊಂದಿಗೇ ಉತ್ತರಿಸಲು ನಿಂತ ಮೋದೀಜಿ 1947 ಕ್ಕಿಂತ ಮೊದಲು ಈ ದೇಶದಲ್ಲಿ ಪ್ರಜಾತಂತ್ರ ಇರಲಿಲ್ಲ ಅಂದುಕೊಂಡಿದ್ದೀರಾ,ನೆಹರು ಕೊಟ್ಟ ಬಳುವಳಿಯೇ ಈ ಪ್ರಜಾತಂತ್ರ ಅಂತ ಭಾವಿಸಿದ್ದೀರಾ ಕಾಂಗ್ರೆಸಿಗರೇ ? ಬುದ್ಧ, ಬಸವಣ್ಣನ ಕಾಲದಲ್ಲೇ ಪ್ರಜಾತಂತ್ರದ ಪ್ರಯೋಗ ನಡೆದಿದೆ , ನಿಮ್ಮ ನೆಹರು ಪ್ರಧಾನಿಯಾದ ಪ್ರಸಂಗದಲ್ಲೇ ಪ್ರಜಾತಂತ್ರಕ್ಕೆ ದೊಡ್ಡ ಅಪಚಾರ ನಡೆದಿತ್ತು . ಇಲ್ಲವಾಗಿದ್ದರೆ ಪಟೇಲ್ ಪ್ರಧಾನಿಯಾಗಿರುತ್ತಿದ್ದರು ಸಮಸ್ಯೆಯೇ ಇರುತ್ತಿರಲಿಲ್ಲ ಅದು ಇಡಿಯಾಗಿ ನಮ್ಮದಾಗಿರುತ್ತಿತ್ತು ಎಂದು ಪ್ರಧಾನಿ ಜಾಡಿಸಿದ್ದು ಸುಮ್ಮನೆ ಅಲ್ಲ.

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇಂದಿಗೂ ಅವರನ್ನು ಮಾತ್ರ  ‘Man of steel’ ’ ಅಥವಾ ಉಕ್ಕಿನ ಮನುಷ್ಯ’ ಎಂದು ಕರೆಯುತ್ತೇವೆ. ಅಂತಹ ಒಬ್ಬ ನಾಯಕ ಮತ್ತೆ ಜನಿಸಲೇ ಇಲ್ಲ. ಈ ಉಕ್ಕಿನ ಮನುಷ್ಯ ಬಾಲಕನಾಗಿದ್ದಾಗ ಕಂಕುಳದ ಕೆಳಗೆ ಕಜ್ಜಿಯಂಥ ಬೊಬ್ಬೆಯೊಂದು ಮೂಡಿತ್ತು. ಈ ರೀತಿಯ ಬೊಬ್ಬೆಗಳಿಗೆ ಆ ಕಾಲದಲ್ಲಿ ಕಾದ ಕಬ್ಬಿಣದ ಸಲಾಕೆಯಿಂದ ಸುಡುವ ರೂಢಿಯಲ್ಲಿತ್ತು. ಆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ವ್ಯಕ್ತಿಯ ಬಳಿಗೆ ಬಾಲಕನನ್ನು ಕರೆದುಕೊಂಡು ಹೋದರು. ಆತ ಕಬ್ಬಿಣ ಕೆಂಪಾಗುವವರೆಗೂ ಕಾಯಿಸಿದರೂ ಹಸುಳೆಯನ್ನು ನೋಡಿದಾಗ ಸುಡಲು ಮನಸಾಗಲಿಲ್ಲ. ಅದನ್ನು ಕಂಡ ಬಾಲಕ, ಏಕಾಗಿ ತಡಮಾಡುತ್ತಿದ್ದೀಯಾ ಕಾವು ಆರುತ್ತಿದೆ, ಬೊಬ್ಬೆಯನ್ನು ಸುಡು…’ ಎಂದು ಸ್ವತಃ ಹೇಳಿದ. ಆ ವ್ಯಕ್ತಿ ಇನ್ನಷ್ಟು ದಿಗಿಲುಗೊಂಡ. ಅಷ್ಟರಲ್ಲಿ ಸ್ವತಃ ಸಲಾಕೆಯನ್ನು ತೆಗೆದುಕೊಂಡ ಬಾಲಕ ತಾನೇ ಬೊಬ್ಬೆಯ ಮೇಲಿಡುತ್ತಿದ್ದರೆ ಅಲ್ಲಿ ನೆರೆದವರು ದಿಗ್ಭ್ರಮೆಯಿಂದ ಚೀರುತ್ತಿದ್ದರು.

ಆದರೆ…

ಆ ಮುಖದಲ್ಲಿ ಮಾತ್ರ ಭಯ-ಭೀತಿ ಅಥವಾ ನೋವಿನ ಲವಲೇಶವೂ ಕಾಣುತ್ತಿರಲಿಲ್ಲ. ಆತ ಮತ್ತಾರೂ ಅಲ್ಲ, ಸರ್ದಾರ್ ವಲ್ಲಭಭಾಯಿ ಪಟೇಲ್! ಅವರು ಶಾಲೆಗೆ ಸೇರಿದಾಗ ಭಾಷಾ ವಿಷಯವಾಗಿ ಮೊದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿದ್ದರು, ನಂತರ ಗುಜರಾತಿಗೆ ಬದಲಾಯಿಸಿಕೊಂಡರು. ಆ ಶಾಲೆಯಲ್ಲಿ ಗುಜರಾತಿ ಬೋಧಿಸುತ್ತಿದ್ದ ಮೇಷ್ಟ್ರಿಗೆ ಸಂಸ್ಕೃತ ವ್ಯಾಮೋಹ ಬಹುವಾಗಿ ಇತ್ತು. ಹಾಗಾಗಿ ಸಂಸ್ಕೃತ ಬಿಟ್ಟು ಗುಜರಾತಿ ಆಯ್ಕೆ ಮಾಡಿಕೊಂಡಿದ್ದ ಪಟೇಲ್, ತನ್ನ ತರಗತಿಗೆ ಕಾಲಿಟ್ಟ ಕೂಡಲೇ ದೊಡ್ಡ ಮನುಷ್ಯ ಬಾರಪ್ಪಾ…’ ಎಂದು ಅ ಸಣ್ಣ ಮನಸ್ಸಿನ ಮೇಷ್ಟ್ರಿಗೇನು ಗೊತ್ತಿತ್ತು ಮುಂದೊಂದು ದಿನ ಆ ಬಾಲಕ ದೊಡ್ಡ ಮನುಷ್ಯನೇ ಅಗುತ್ತಾನೆಂದು! ತರಗತಿಗೆ ಆಗಮಿಸಿದ ಪಟೇಲರನ್ನು ಉದ್ದೇಶಿಸಿ, ಸಂಸ್ಕೃತವನ್ನೇಕೆ ಬಿಟ್ಟು ಗುಜರಾತಿ ಆಯ್ಕೆ ಮಾಡಿಕೊಂಡೆ’ ಎಂದು ಪ್ರಶ್ನಿಸಿದರು. ಅದಕ್ಕೆ ಪಟೇಲ್ ಹೇಳಿದರು, ಎಲ್ಲರೂ ಸಂಸ್ಕೃತ ಆಯ್ಕೆ ಮಾಡಿಕೊಂಡರೆ ನಿಮಗೆ ಕೆಲಸವೇ ಇರುವುದಿಲ್ಲ!’. ಮತ್ತೆ ಸಿಟ್ಟಿಗೆದ್ದ ಮೇಷ್ಟ್ರು ಹೆಡ್ ಮಾಸ್ಟರ್ ದೂರು ನೀಡಿದರು. ಅವರು ಕರೆಸಿ ಕೇಳಿದಾಗ ಪಟೇಲ್ ಎಲ್ಲವನ್ನೂ ವಿವರಿಸಿದರು. ಆಗ ಹೆಡ್ ಮಾಸ್ಟರ್ ಇಂತಹ ಧೈರ್ಯವಂತ ವಿದ್ಯಾರ್ಥಿಯನ್ನು ನಾನೆಂದೂ ನೋಡಿರಲಿಲ್ಲ!’ 1946ರಲ್ಲಿ ಸರ್ದಾರ್ ಪಟೇಲರೇ ಮುಂದಿನ ಪ್ರಧಾನಿಯಾಗಬೇಕು ಎಂದು 16ರಲ್ಲಿ 13 ರಾಜ್ಯಗಳು ಒಕ್ಕೊರಲಿನ ಕರೆಕೊಟ್ಟಿದ್ದು, ನಿರ್ಧಾರ ತೆಗೆದುಕೊಂಡಿದ್ದು ಬಹುಶಃ ಇದೇ ಕಾರಣಕ್ಕೆ!! ಅವರನ್ನು ಉಕ್ಕಿನ ಮನುಷ್ಯ ಎಂದು ದೇಶವಾಸಿಗಳು ಕರೆಯುವುದೂ ಈ ಕಾರಣದಿಂದಲೇ!!!

ಆದರೂ ಪಟೇಲರೇಕೆ ಪ್ರಧಾನಿಯಾಗಲಿಲ್ಲ?

ಅಂದು ನಡೆದದ್ದಿಷ್ಟೇ. 1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಏರ್ಪಾಡಾಗಿತ್ತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವುದೂ ಖಾತ್ರಿಯಾಗಿತ್ತು. ಹಾಗಾಗಿ ಯಾರು ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೋ ಅವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುತ್ತಾರೆ ಎಂದಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 16ರಲ್ಲಿ 13 ರಾಜ್ಯಗಳು ಸದಾರ್ರ ವಲ್ಲಭಭಾಯಿ ಪಟೇಲರ ಹೆಸರನ್ನು ಸೂಚಿಸಿದವು. ಇನ್ನೇನು ಪಟೇಲ್ ಅಧ್ಯಕ್ಷರಾಗುತ್ತಾರೆ, ಮೊದಲ ಪ್ರಧಾನಿಯೂ ಅವರೇ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ ಪಟೇಲರನ್ನು ಕರೆಸಿಕೊಂಡ ಮಹಾತ್ಮ ಗಾಂಧೀಜಿ, ‘ಚುನಾವಣೆಗೆ ನಿಲ್ಲಬೇಡ, ಬದಲಿಗೆ ಜವಾಹರಲಾಲ್ ನೆಹರು ಉಮೇದುವಾರಿಕೆಗೆ ಬೆಂಬಲ ನೀಡು’ ಎಂದು ಮನವಿ ಮಾಡಿಕೊಂಡರು. ಅಂದು ಗಾಂಧೀಜಿಯವರ ಸಣ್ಣತನಕ್ಕೆ ಪ್ರತಿಯಾಗಿ ಅದೇ ತೆರನಾದ ಸಣ್ಣತನ ತೋರಲಿಲ್ಲ, ಮರುಮಾತನಾಡದೇ, ಮರುಯೋಚನೆ ಮಾಡದೆ ನಿಜವಾದ ಮಹಾತ್ಮನಂತೆ ಗಾಂಧೀಜಿ ಮನವಿಗೆ ಓಗೊಟ್ಟರು!

ಹೀಗೆ ದುರದೃಷ್ಟವಶಾತ್, ಸ್ವಾತಂತ್ರ್ಯ ತಂದುಕೊಟ್ಟ ಹೆಗ್ಗಳಿಕೆಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ ಗಾಂಧೀಜಿ, ಹೊಸ ರಾಷ್ಟ್ರನಿರ್ಮಾಣಕ್ಕೆ ಕಳಪೆ ಅಡಿಗಲ್ಲು ಇಟ್ಟು ಭಾರತೀಯರ ಭವಿಷ್ಯವನ್ನೇ ಮಂಕಾಗಿಸಿ ಬಿಟ್ಟರು!

ಹಾಗಂತ ಸರ್ದಾರ್ ಪಟೇಲ್ ನೆಹರು ಅವರಂತೆ ಸ್ವಾರ್ಥಿ, ಅಧಿಕಾರ ಲಾಲಸಿಯಾಗಿರಲಿಲ್ಲ, ಗಾಂಧೀಜಿಯವರಂತೆ ನಾನು, ನಾನು ಹೇಳಿದ್ದೇ ನಡೆಯಬೇಕು ಎಂಬ ಹಠವಾದಿಯೂ ಆಗಿರಲಿಲ್ಲ, ಅವರಿಗೆ ಮುಖ್ಯವಾಗಿದ್ದಿದ್ದು ದೇಶದ ಹಿತ ಅದಕ್ಕೆ ಯಾರೇ ವಿರುದ್ಧವಾಗಿದ್ದರೂ ಸಹಿಸುತ್ತಿರಲಿಲ್ಲ. 1942ರಲ್ಲಿ ಕ್ವಿಟ್ ಇಂಡಿಯಾ ಅಥವಾ ಚಲೇ ಜಾವ್ ಅಥವಾ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾದಾಗ ಬ್ರಿಟಿಷರು ಕಾಂಗ್ರೆಸ್‌ನ ಬಹುತೇಕ ಎಲ್ಲ ನಾಯಕರನ್ನೂ ಬಂಧಿಸಿ ಜೈಲಿಗೆ ತಳ್ಳಿದರು. ಅವರು ಮತ್ತೆ ಬಿಡುಗಡೆಯಾಗಿದ್ದು ಮೂರು ವರ್ಷಗಳ ನಂತರ. ಹಾಗೆ ಹೊರಬರುವ ಮುನ್ನ ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿ ಮುಸ್ಲಿಂ ಲೀಗ್‌ನ ನಾಯಕರು ಒಂದರ ನಂತರ ಒಂದರಂತೆ ಅಡಚಣೆಗಳನ್ನು ಒಡ್ಡಲಾರಂಭಿಸಿದರು.

ಭಾರತ ಸ್ವತಂತ್ರಗೊಳ್ಳುವುದಕ್ಕೇ ಅಡ್ಡಿಯಾದರು. ಆಗ ವಿರುದ್ಧ,We shall fight all those who came in the way of India’s freedom’, ಭಾರತ ಸ್ವತಂತ್ರಗೊಳ್ಳುವುದಕ್ಕೆ ಯಾರೇ ಅಡ್ಡಿಯಾದರೂ ಅವರನ್ನು ಮೆಟ್ಟಿ ಗುರಿ ಮುಟ್ಟುತ್ತೇವೆ ಎಂದು ಗುಡುಗಿದ ಏಕಮಾತ್ರ ಕಾಂಗ್ರೆಸ್ಸಿಗ ಪಟೇಲ್! ಇಂತಹ ಪಟೇಲ್ ಸ್ವಾತಂತ್ರ್ಯ ಬಂದಾಗ ಪ್ರಧಾನಿಯಾಗಬೇಕಿತ್ತು, ಆದರೆ ಉಪಪ್ರಧಾನಿಯಾಗಿ ಗೃಹಖಾತೆ ಪಡೆದುಕೊಂಡರು. ಒಂದು ಕಾಲದಲ್ಲಿ ಶೋಕಿಲಾಲನೇ ಆಗಿದ್ದ ಗಾಂಧೀಜಿಗೆ ಬಹುಶಃ ನೆಹರು ಧಿರಿಸು, ಧಿಮಾಕು, ದುಡ್ಡಿನ ಮದಗಳು ಹಿತವಾಗಿ ಕಂಡಿರಬಹುದು. ಪಟೇಲ್ ಧಿರಿಸಿನಲ್ಲಿ ಅಪ್ಪಟ ಭಾರತೀಯತೆ ಇದ್ದರೂ ವಿದ್ಯೆಯಲ್ಲಿ ಅವರು ನೆಹರುಗಿಂತ ಕಡಿಮೆ ಇರಲಿಲ್ಲ. 1875, ಅಕ್ಟೋಬರ್ 31ರಂದು ಜನಿಸಿದ ಪಟೇಲ್, ಇಂಗ್ಲೆಂಡಿಗೆ ಹೋಗಲು ಹಣವಿಲ್ಲದಿದ್ದರೂ ವಕೀಲನಾಗಬೇಕೆಂಬ ಕನಸನ್ನು ಕೈಬಿಡದೆ, ಅನ್ಯರಿಂದ ಪುಸ್ತಕಗಳನ್ನು ಎರವಲು ಪಡೆದು, ಮನೆಯಲ್ಲೇ ಕುಳಿತು ಓದಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡು ಪಾಸಾಗಿ ಯಶಸ್ವಿ ಬ್ಯಾರಿಸ್ಟರ್ ಆಗಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಸ್ವಾರ್ಥರಹಿತ ದೇಶಪ್ರೇಮಿ. ಇಂತಹ ವ್ಯಕ್ತಿಯನ್ನು ಬಿಟ್ಟು ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್ ಪತ್ನಿ ಸಿಗರೇಟು ಸುಡುತ್ತಾ ದೇಶವನ್ನು ದಹಿಸಲು ಬಿಟ್ಟಿದ್ದ ನೆಹರು ಅದಾವ ಕಾರಣಕ್ಕೆ ಗಾಂಧೀಜಿಗೆ ಇಷ್ಟವಾದರೋ ಅವರ ಆ ರಾಮನೇ ಬಲ್ಲ?! ಇದೇನೇ ಇರಲಿ, ಉಪಪ್ರಧಾನಿಯಾದ ಪಟೇಲರ ಮುಂದಿನ ಕೆಲಸ ಸುಲಭವಾಗಿರಲಿಲ್ಲ!

ಭಾರತವನ್ನು ಬಿಟ್ಟು ತೊಲಗುವಾಗಲೂ ಬ್ರಿಟಿಷರು ತಮ್ಮ ಕಿಡಿಗೇಡಿ ಬುದ್ಧಿಯನ್ನು ಬಿಡಲಿಲ್ಲ, ತಮ್ಮ ನಿಯಂತ್ರಣದಲ್ಲಿದ್ದ ಪ್ರದೇಶಗಳು ಮಾತ್ರವಲ್ಲ, ತಮ್ಮ ಅಧೀನದಲ್ಲಿದ್ದ, ಡಚ್ಚರು, ಪೋರ್ಚುಗೀಸರ ಕೈಯಲಿದ್ದ ರಾಜ್ಯಗಳೂ ಇನ್ನು ಸ್ವತಂತ್ರ ಎಂದು ಹೊರಟುಹೋದರು. ಅಂದರೆ ಅವಿಭಜಿತ ಭಾರತ 625 ಸಣ್ಣ, ದೊಡ್ಡ ಹೋಯಿತು. ಅವುಗಳಲ್ಲಿ 554 ರಾಜ್ಯಗಳು ಪಾಕ್ ನಿಂದ ಪ್ರತ್ಯೇಕಗೊಂಡ ಭಾರತದಲ್ಲಿದ್ದವು! ಇವುಗಳನ್ನೆಲ್ಲ ಭಾರತದ ಒಕ್ಕೂಟದೊಳಗೆ ಸೇರ್ಪಡೆ ಮಾಡುವುದು, ಒಬ್ಬೊಬ್ಬ ರಾಜನನ್ನೇ ಮನವೊಲಿಸುವುದು ಸಾಮಾನ್ಯ ಕೆಲಸವೇ?

ಒಂದು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು 17 ವರ್ಷ ದೇಶವಾಳಿದ ನೆಹರುಗೆ ಆಗಲಿಲ್ಲ, ಆನಂತರ 49 ವರ್ಷ ದೇಶವಾಳಿದ ಇನ್ನುಳಿದವರಿಗೂ ಆಗಿಲ್ಲ, ಹಾಗಿರುವಾಗ ಕೇವಲ ಮೂರು ವರ್ಷ ಉಪಪ್ರಧಾನಿಯಾಗಿದ್ದ ಒಬ್ಬ ವ್ಯಕ್ತಿ 554 ರಾಜ್ಯ, ರಾಜರುಗಳನ್ನು ಹೇಗೆ ಮನವೊಲಿಸಿರಬೇಕು, ಬೆದರಿಸಿ ಬಗ್ಗಿಸಿರಬೇಕು, ಇಲ್ಲವೆ ಬಗ್ಗುಬಡಿದು ತಂದಿರಬೇಕು ಯೋಚಿಸಿ?! ಅವತ್ತಿದ್ದ ಪರಿಸ್ಥಿತಿಯನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾ? ಒರಿಸ್ಸಾ ಒಂದೇ ರಾಜ್ಯದಲ್ಲಿ 26 ಸಣ್ಣ ರಾಜ್ಯಗಳಿದ್ದವು ಈಗಿನ ಛತ್ತೀಸ್‌ಗಢದಲ್ಲಿ 15, ಸೌರಾಷ್ಟ್ರದಲ್ಲಿ 14 ಜನ ಆಳುತ್ತಿದ್ದರು. ಈ ಪುಡಿ ಪಾಳೇಗಾರರ ಮಾತು ಹಾಗಿರಲಿ, 500 ಪ್ರಿನ್ಸ್ಲಿ ಸ್ಟೇಟ್(ಅಧೀನ ಸಂಸ್ಥಾನ)ಗಳಿದ್ದವು. ಇಷ್ಟು ಮಾತ್ರವಲ್ಲ, ಭಾರತದೊಂದಿಗೆ ಸೇರ್ಪಡೆಗೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿದ, ಪ್ರತಿರೋಧಕ್ಕೂ ಮುಂದಾದ ಹೈದರಾಬಾದ್ ನಿಜಾಮನನ್ನು ಬಗ್ಗುಬಡಿಯಲು ಪಟೇಲ್ ರೂಪಿಸಿದ ಆಪರೇಷನ್ ಪೋಲೋ’ವನ್ನು ಮರೆಯಲಾದೀತೆ?

ದಕ್ಷಿಣದ ದಖ್ಖನ್ ಪ್ರಸ್ಥಭೂಮಿಯಲ್ಲಿ ಗೋವು, ಪುಷ್ಕಳ ಭೋಜನ ಮಾಡಿಕೊಂಡಿದ್ದ ಹೈದರಾಬಾದ್ ನಿಜಾಮ ನವಾಬ್ ರ್ಮೀ ಉಸ್ಮಾನ್ ಅಲಿಖಾನ್ ಹಾಗೂ ಆತನ ಬೆಂಗಾವಲಿಗೆ ನಿಂತಿದ್ದ ಕಾಸಿಂ ರಿಝ್ವಿ ನೇತೃತ್ವದ ರಝಾಕರ್‌ಗಳು ಕಾಲುಕೆರೆದುಕೊಂಡು ಸಂಘರ್ಷಕ್ಕೆ ಬಂದಿದ್ದರು. ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಮುಸ್ಲಿಂ ಅಧಿಪತ್ಯಕ್ಕೊಳಗಾಗಿದ್ದ ರಾಜ್ಯ ಹೈದರಾಬಾದಾಗಿತ್ತು. ಹಾಗಿದ್ದರೂ ಭಾರತದೊಂದಿಗೆ ಸೇರ್ಪಡೆಯಾಗಬೇಕೆಂದು ಒತ್ತಡ ಹೆಚ್ಚಾದ ಕೂಡಲೇ ಸ್ಥಳೀಯ ಹಿಂದುಗಳ ಮಾರಣಹೋಮ ಮಾಡಲಾರಂಭಿಸಿದರು. ಅರಬ್, ರೋಹಿಲ್ಲಾ, ಉತ್ತರ ಪ್ರದೇಶದ ಮುಸ್ಲಿಮರು ಹಾಗೂ ಪಠಾಣರನ್ನು ಸೇರಿಸಿಕೊಂಡು 22 ಸಾವಿರ ಸಂಖ್ಯೆಯ ಬಂದೂಕುಧಾರಿ ಸೇನೆ ನಿಂತಿತ್ತು, ಇನ್ನು ಸುಮಾರು ಒಂದೂವರೆ ಲಕ್ಷ ಮುಸಲ್ಮಾನರು ಕತ್ತಿ, ಖಡ್ಗ ಹಿಡಿದುಕೊಂಡು ಸಿದ್ಧರಾಗಿದ್ದರು. ಆಗ ಮೇರ್ಜ ಜನರಲ್ ಚೌಧರಿಯವರ ನೇತೃತ್ವದಲ್ಲಿ ಸೇನಾ ತುಕಡಿಯನ್ನು ಕಳುಹಿಸಿದ ಪಟೇಲರು, ನಿಜಾಮ ಹಾಗೂ ಅವನ ಬೆಂಬಲಿಗರನ್ನು ಮಟ್ಟಹಾಕಿ, ಹೈದರಾಬಾದನ್ನು ಭಾರತದೊಂದಿಗೆ ವಿಲೀನ ಮಾಡಿದರು.

ಅಣಕವೆಂದರೆ ಅಂದು ದೇಶ ಒಡೆದ ಮುಸ್ಲಿಂ ಲೀಗ್ ಹೆಸರು ಇಟ್ಟುಕೊಂಡಿರುವವರ ಜತೆ ಇಂದು ಕೇರಳದಲ್ಲಿ ಕೈಜೋಡಿಸಿರುವುದು ಮಾತ್ರವಲ್ಲ, ಅವತ್ತು ರಝಾಕರ್ಸ್ ಆರ್ಮಿ ಕಟ್ಟಿಕೊಂಡು ಭಾರತದ ಸೇನೆಯ ಜತೆ ಸಂಘರ್ಷಕ್ಕಿಳಿದಿದ್ದ ಸೇರಿರುವ ಮತಾಂಧ ಅಸಾದುದ್ದೀನ್ ಓವೈಸಿ ಜತೆಯೂ ಕಾಂಗ್ರೆಸ್ ಸರಕಾರ ನಡೆಸುತ್ತಿದೆ! ಪಟೇಲ್ ಸಾಧನೆ ಇಷ್ಟು ಮಾತ್ರವಲ್ಲ, 1947ರ ಸೆಪ್ಟೆಂಬರ್ 25ರಂದು ಕಾಶ್ಮೀರದ ರಾಜ ಹರಿಸಿಂಗ್ ಬಳಿಗೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಜತೆ ಕೆಪಿ ಮೆನನ್‌ರನ್ನು ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿದ ಪತ್ರವನ್ನು ತರಿಸಿಕೊಂಡು ಕಾಶ್ಮೀರ ಪಾಕಿಸ್ತಾನದ ಪಾಲಾಗದಂತೆ ತಡೆದವರೂ ಪಟೇಲರೇ. ಇಂತಹ ಸಾಧನೆ, ಪ್ರಯತ್ನ, ಎದೆಗಾರಿಕೆಯನ್ನು ಕಂಡ ಡಾ. ರಾಜೇಂದ್ರ ಪ್ರಸಾದ್ ಪಟೇಲರನ್ನು ಶ್ಲಾಘಿಸುತ್ತಾ-’ಇಂಥದ್ದೊಂದು ಉದಾಹರಣೆ ನಮ್ಮ ದೇಶದ ಇಲ್ಲ, ಅಷ್ಟೇಕೆ ಮಗದೊಂದು ದೇಶದಲ್ಲೂ ಇಂತಹ ಉದಾಹರಣೆಯನ್ನು ಕಾಣಲು ಸಾಧ್ಯವಿಲ್ಲ’ ಎಂದಿದ್ದರು! ಅಷ್ಟು ಮಾತ್ರವಲ್ಲ, ಪಟೇಲರ ಎದೆಗಾರಿಕೆಗೆ ನಿಬ್ಬೆರಗಾದ ಅಮೆರಿಕದ ಖ್ಯಾತ ಟೈಮ್ಸ್ ’ ಮ್ಯಾಗಜಿನ್, ಪಟೇಲರ ಭಾವಚಿತ್ರ ಹೊಂದಿದ್ದ ಕವರ್ ಸ್ಟೋರಿ ಪ್ರಕಟಿಸಿತ್ತು.
ಇಂತ ಪಟೇಲರು ಪ್ರಧಾನಿಯಾಗಿದ್ದರೆ ದೇಶದ ಭವಿಷ್ಯವೇ ಬೇರೆಯಾಗಿರುತ್ತಿತ್ತು ಎಂಬ ಮೋದೀಜಿ ಮಾತು ನಿಜ ಅಲ್ಲವೇ ?!
                                                                     ✍ಪ್ರತಾಪ್ ಸಿಂಹ

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

Computers

First Generation of Computers (1942-1955) : The beginning of commercial computer age is from UNIVAC (Universal Automatic Computer). It was developed by two scientists Mauchly and Echert at the Census Department of United States in 1947. The first generation computers were used during 1942-1955. They were based on vacuum tubes. Examples of first generation computers are ENIVAC and UNIVAC-1. Advantages Vacuum tubes were the only electronic component available during those days.Vacuum tube technology made possible to make electronic digital computers.These computers could calculate data in millisecond. Disadvantages The computers were very large in size.They consumed a large amount of energy.They heated very soon due to thousands of vacuum tubes.They were not very reliable.Air conditioning was required.Constant maintenance was required.Non-portable.Costly commercial production.Limited commercial use.Very slow speed.Limited programming capabilities.Used machine language only.Used...