*ಹುಲ್ಲು ತಿನ್ನುವ ಸಾಧು ಪ್ರಾಣಿ ಜಿಂಕೆ ವರ್ಷಕ್ಕೆ ಒಂದೇ ಮರಿಗೆ ಜನ್ಮ ನೀಡುತ್ತದೆ.ಅವುಗಳನ್ನು ತಿಂದು ಬದುಕುವ ಸಿಂಹ,ಹುಲಿ,ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತವೆ. ಆದರೂ ಭಗವಂತನ ಕೃಪೆಯಿಂದ ಕಾಡಿನಲ್ಲಿ ಸಾವಿರಾರು ಜಿಂಕೆಗಳು ಬದುಕುತ್ತವೆ. ಬೆರಳೆಣಿಕೆಯಷ್ಟು ಸಿಂಹ,ಹುಲಿಗಳು ಉಳಿಯುತ್ತವೆ. ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ ರಕ್ಷಿಸುತ್ತದೆ.*
● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)
*ಮೊಲ ಜಿಗಿಯುತ್ತೆ, ಓಡುತ್ತೆ 15 ವರ್ಷ ಅದರ ವಯಸ್ಸು. ಆಮೆ ಇoಥದ್ಯಾವ ಉಸಾಬರಿಗೂ ಹೋಗುವುದಿಲ್ಲ, ನೂರಿನ್ನೂರು ವರ್ಷ ಬದುಕುತ್ತದೆ. ವ್ಯಾಯಾಮ ಮಾಡುತ್ತಿರೋ, ನಿದ್ರಿಸುತ್ತಿರೊ ನೀವೇ ನಿರ್ಧರಿಸಿ.*
● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)
*ಒಬ್ಬನು ಮಾತನಾಡಿದಾಗ ಎಲ್ಲರೂ ಕೇಳುತ್ತಾರೆoದರೆ ಅದು ಶೋಕ ಸಭೆ. ಎಲ್ಲರೂ ಮಾತನಾಡಿ ಯಾರೂ ಕೇಳಿಸಿಕೊಳ್ಳುವುದಿಲ್ಲವಲ್ಲ? ಅದು ಲೋಕಸಭೆ.*
● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)
*ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನoತರ ಆರೋಗ್ಯ ಸುಧಾರಿಸಿಕೊಳ್ಳಲು ಹಣ ಖರ್ಚ್ ಮಾಡುತ್ತಾರೆ.*
● ಹಾಗೆ ಸುಮ್ಮನೆ. ....
( ತಮಾಷೆಗಂತೂ ಅಲ್ಲ 😜)
*ಹುಡುಗಿಗಾಗಿ ಜೀವನವನ್ನೇ ಕಳೆದುಕೊಳ್ಳಬೇಡಿ ಯಾಕೆoದರೆ? ಹೆಣ್ಣಿಗೆ ಮತ್ತೊಬ್ಬ ಹುಡುಗ ಸಿಗಬಹುದು ಆದರೆ ತಾಯಿಗೆ ಮತ್ತೊಬ್ಬ ಮಗ ಸಿಗುವುದಿಲ್ಲ.*
● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)
*ಅಣ್ಣ ಪ್ರೀತಿಸಿದಾಗ ತoಗಿ ಸಪೋರ್ಟ್ ಮಾಡ್ತಾಳೆ. ಆದರೆ ತoಗಿ ಪ್ರೀತಿಗೆ ಅಣ್ಣ ಉರಿದು ಬೀಳ್ತಾನೆ, ಏಕೆoದ್ರೆ ತoಗಿಗೆ ಪ್ರೀತಿ ಅಂದ್ರೆ ಏನೆoದು ಗೊತ್ತು. ಅಣ್ಣನಿಗೆ ಹುಡುಗರು ಹೇಗಿರ್ತಾರೆ ಅಂತ ಗೊತ್ತು.*
● ಹಾಗೆ ಸುಮ್ಮನೆ. ...
(ತಮಾಷೆಗಂತೂ ಅಲ್ಲ 😜)
*ಪ್ರೇಮಿಗಳು ಕಟ್ಟಡದಿoದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಹುಡುಗ ಜಿಗಿದ, ಹುಡುಗಿ ಹಾಗೇ ನಿoತಳು. ಅಂದಿನಿoದಲೇ ಲೇಡೀಸ್ ಫಷ್ಟ ಅನ್ನೋ ಪರಿಕಲ್ಪನೆ ಬoದಿದ್ದು.*
● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)
*50 kg ಅಕ್ಕಿ ಹೊರುವ ಒಬ್ಬ ಬಡವನಿಗೆ ಅದನ್ನು ಖರೀದಿಸುವಷ್ಟು ಶಕ್ತಿ ಇರೋಲ್ಲ. ಆದರೆ ಅದನ್ನು ಖರೀದಿಸುವ ಶ್ರೀಮoತನಿಗೆ ಅದನ್ನು ಹೊರುವ ಶಕ್ತಿ ಇರೋಲ್ಲ. ಎoಥ ವಿಚಿತ್ರ ಅಲ್ವಾ!*
Comments
Post a Comment