Skip to main content

ಪ್ರತಾಪ್ ಸಿಂಹ

*ಪ್ರತಾಪ್ ಸಿಂಹರ ಬಗ್ಗೆ ನಿಮಗೆಷ್ಟು ಗೊತ್ತು???*

ಆಗ ತಾನೆ ಇಪ್ಪತ್ತೆರಡು ವರ್ಷ ಪ್ರಾಯದ ಯುವಕ .... ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ ಹೊರಬಂದ... ಮುಂದೆ ಯಾವ್ದಾದ್ರು ಒಂದು ಕಡೆ ಕೆಲಸ ಮಾಡಿ ಜೀವನ ಸಾಗಿಸಬಹುದಿತ್ತು.... ಆದರೆ ಆತನಿಗೆ ಧರ್ಮ ದೇಶಪ್ರೇಮದ ಕಿಚ್ಚು ರಕ್ತದಲ್ಲಿ ಹರಿಯಲು ಶುರು ಮಾಡಿತ್ತು....

ಯೌವನದಲ್ಲಿ ನೋಡಲು ಸ್ಥುರದ್ರೂಪಿ ಚೆಲುವನಾಗಿದ್ದ ಪ್ರತಾಪ್ ಸಿಂಹ ಕೈಯಲ್ಲಿ ರೋಜ್ ಹಿಡಿದು ಹುಡುಗಿಯರ ಹಿಂದೆ ಹೋಗದೆ ಕೈಯಲ್ಲಿ *ಲೇಖನಿ* ಎಂಬ ಅಸ್ತ್ರವನ್ನು ಹಿಡಿದು ಕೂತಿದ್ದ....

ಶುರುವಾಯಿತು ನೋಡಿ *ಬೆತ್ತಲೆ_ಜಗತ್ತಿನ ಅಬ್ಬರ....* ಮಹಾನ್ ಪತ್ರಕರ್ತರು ಹೇಗೆ ಅಂಕಣ ಬರೆದರೂ ಓದದಿದ್ದ ಜನರು ಪ್ರತಾಪ್ ಸಿಂಹನ ಅಂಕಣಗಳನ್ನು ಮುಗಿಬಿದ್ದು ಓದಲು ಶುರು ಮಾಡಿದರು.... ಕಾರಣ ಆತ ತನ್ನ ಅಂಕಣದಲ್ಲಿ ಕೊಡುತ್ತಿದ್ದ ವಿಷಯಗಳ ಸ್ಪಷ್ಟತೆ ಮತ್ತು ಆ ವಿಷಯದ ಬಗ್ಗೆ ಪೂರಕ ದಾಖಲೆಗಳು ಒದಗಿಸುತ್ತಿದ್ದ ರೀತಿ ಅಂಕಣದಲ್ಲಿನ ಪದ ಪ್ರಯೋಗ ಅಬ್ಬಾ ಓದುವಾಗ ರೋಮಾಂಚನ ಆಗುತ್ತಿತ್ತು...

ಬಾವಿಯಲ್ಲಿರುವ ಕಪ್ಪೆಗಳಂತೆ ಬರಿ ನಮ್ಮ ಸುತ್ತ ಮುತ್ತಲಿನ ವಿಷಯಗಳನ್ನೇ ಓದುತ್ತಿದ್ದ ನಮ್ಮಂಥವರಿಗೆ *ಜಾಗತಿಕ* ವಿದ್ಯಮಾನಗಳನ್ನು ಕನ್ನಡಕ್ಕೆ ಅನುವಾದಿಸಿ ತನ್ನ ವಿಶಿಷ್ಟ ರೀತಿಯಲ್ಲಿ ಓದುಗರಿಗೆ ಉಣಪಡಿಸುತ್ತಿದ್ದ ಪ್ರತಾಪ್ ಸಿಂಹರ ಬರವಣಿಗೆ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ....

ಒಬ್ಬ ಪತ್ರಕರ್ತನ ಮೂಲ ಸಿದ್ಧಾಂತವೇ ಪಕ್ಷಾತೀತವಾಗಿ ಬರೆಯುವುದು.... ಪ್ರತಾಪ್ ಸಿಂಹ ಇದರಿಂದ ಹೊರತಾಗಿಲ್ಲ... ಯಾಕಂದ್ರೆ ಈತ *ಸೋನಿಯಾ_ಗಾಂಧಿಯ* ಒಳ್ಳೆಯ ಕಾರ್ಯವನ್ನು ಮೆಚ್ಚಿ ಬರೆದು ಮತ್ತೊಂದು ಕಡೆ ಅದೇ ಸೋನಿಯಾ ಗಾಂಧಿಯ ಕರಾಳ ಮುಖದ ದರ್ಶನವನ್ನು ಕೂಡ ಓದುಗರ ಮುಂದೆ ತೆರೆದಿಡುತ್ತಾರೆ.....

ಇನ್ನೂ *ವಾಜಪೇಯಿ ಅಡ್ವಾಣಿ ಫರ್ನಾಂಡಿಸ್* ರಂತಹ ಶ್ರೇಷ್ಠ ಬಿಜೆಪಿ ನಾಯಕರ ಕಾರ್ಯ ವೈಖರಿ ಬಗ್ಗೆ ಮೆಚ್ಚಿ ಬರೆಯುತ್ತಿದ್ದ ಪ್ರತಾಪ್ ಸಿಂಹ *ರೆಡ್ಡಿ_ಬ್ರದರ್ಸ್* ಭ್ರಷ್ಟಾಚಾರದ ಬಗ್ಗೆ ಒಂದು ಪುಸ್ತಕವನ್ನು ಬರೆದರು ಅದು ಕೂಡ ದಾಖಲೆಯ ಸಮೇತ.....

ಇನ್ನೂ 2008 ರಲ್ಲಿ ಇದೇ ಪ್ರತಾಪ್ ಸಿಂಹ ಸದಾ ಮಾಧ್ಯಮಗಳಿಂದ ಟೀಕೆಗೆ ಒಳಗಾಗುತ್ತಿದ್ದ ಗುಜರಾತ್ ಮುಖ್ಯಮಂತ್ರಿ *ನರೇಂದ್ರ_ಮೋದಿ*ಬಗ್ಗೆ ಒಂದು ಪುಸ್ತಕ ಬರೆಯುತ್ತಾರೆ.... ಆ ಪುಸ್ತಕ ಯಾವುದು ಗೊತ್ತಾ.. ಅದೇ ನನ್ನಂತ ಕೋಟ್ಯಾಂತರ ಯುವಕರ ಪಾಲಿಗೆ ದೈವವಾಣಿ ಆದಂತ ............
*ಯಾರೂ_ತುಳಿಯದ_ಹಾದಿ ನರೇಂದ್ರ_ಮೋದಿ*

ಬರು ಬರುತ್ತಾ ಪ್ರತಾಪ್ ಸಿಂಹರ ಅಂಕಣಗಳು ಪುಸ್ತಕಗಳಾಗಿ ಹೊರ ಬರುವುದಕ್ಕೆ ಶುರುವಾಯಿತು... ಹೇಗೆ *ಕುವೆಂಪು ಭೈರಪ್ಪ* ನಂತಹ ಶ್ರೇಷ್ಠರು ಒಂದು ರೀತಿಯ ಓದುಗ ಅಭಿಮಾನಿಗಳ ಬಳಗ ಹೊಂದಿದ್ದರೋ ಹಾಗೆ ಪ್ರತಾಪ್ ಸಿಂಹರಿಗೆ ಒಂದು ಓದುಗರ ಬಳಗ ಸೃಷ್ಟಿಯಾಯಿತು.... ಇಷ್ಟೆಲ್ಲಾ ಆಗುವ ಹೊತ್ತಿಗೆ ಪ್ರತಾಪ್ ಸಿಂಹರ ವಯಸ್ಸು ಮೂವತ್ತರ ಆಸುಪಾಸು.....

ಇವತ್ತು ಸಾಯೋ ವಯಸ್ಸಿನಲ್ಲಿ *ಪ್ರಗತಿಪರ* ಅಂತ ಹೆಸರಿಟ್ಟುಕೊಂಡು ಬಂಢಬಾಳು ಬದುಕುತ್ತಿರುವ ಮುದಿ ಬುದ್ಧಿಜೀವಿಗಳ ನಡುವೆ ಪ್ರತಾಪ್ ಸಿಂಹನಂತ ಬರಹಗಾರ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ....

ಇನ್ನೂ ವಿಶೇಷ ಏನಂದ್ರೆ ಪ್ರತಾಪ್ ಸಿಂಹರ ಅಂಕಣಗಳು ಕೋರ್ಟ್ ತೀರ್ಪುಗಳು NIA reports ಸಿಬಿಐ ತನಿಖೆಯ ದಾಖಲೆಗಳನ್ನು ಒಳಗೊಂಡಿರುತ್ತವೆ.... ಇದೇ ಕಾರಣಕ್ಕೆ ಪ್ರತಾಪ್ ಸಿಂಹ ಇಷ್ಟ ಆಗೋದು....

ಇನ್ನೂ *ಹಿಂದುತ್ವದ* ವಿಷಯಕ್ಕೆ ಬಂದರೆ ಪ್ರತಾಪ್ ಸಿಂಹ ಬೆಂಕಿ ಚೆಂಡು... ಅಂತರಾಷ್ಟ್ರೀಯ *ಭಯೋತ್ಪಾದನೆ* ಭಾರತದ ಆಂತರಿಕ ಭಯೋತ್ಪಾದನೆ *ಕಾಶ್ಮೀರ* ಸಮಸ್ಯೆ ದೇಶದ ಭದ್ರತೆಯ ಬಗ್ಗೆ ಆತ ದಾಖಲೆ ಸಮೇತ ಕೊಟ್ಟ ಅಂಕಣಗಳು ಒಂದಕ್ಕಿಂಥ ಒಂದು ಅದ್ಭುತ.....

ಪ್ರತಾಪ್ ಸಿಂಹರ ಮನಸಲ್ಲಿ *ಸರಸ್ವತಿ* ಖಾಯಂ ಆಗಿ ನೆಲೆಸಿದ್ದಾಳೆ ಅನ್ನೋದು ಅತಿಶಯೋಕ್ತಿಯೇನಲ್ಲ....
ಆತ ತನ್ನ ಬರಹಗಳಿಂದ ಅದೆಷ್ಟೊ ಯುವಮನಸ್ಸುಗಳನ್ನು ಗೆದ್ದಿದ್ದಾನೆ....

ನಿಮಗೆ ಗೊತ್ತಿದೆಯಾ ಇದೇ ಪ್ರತಾಪ್ ಸಿಂಹ ಅದೆಷ್ಟೊ ಬಾರಿ *ಮತಾಂಧರ* ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಬದುಕಿ ಬಂದಿದ್ದಾರೆ....

ನನಗಂತೂ ಪ್ರತಾಪ್ ಸಿಂಹರ ಬಗ್ಗೆ ತುಂಬಾ ಅಭಿಮಾನ ಇದೆ.... ಯಡಿಯೂರಪ್ಪ ಈಶ್ವರಪ್ಪ ಇವರನ್ನು ನೋಡಿಕೊಂಡು ಪ್ರತಾಪ್ ಸಿಂಹ ರಾಜಕೀಯಕ್ಕೆ ಪ್ರವೇಶ ಮಾಡಿಲ್ಲ..... ಇವರು ಸ್ಪೂರ್ತಿ ಪಡೆದುಕೊಂಡಿರುವುದು *ಶ್ಯಾಮ್_ಪ್ರಸಾದ್_ಮುಖರ್ಜಿ ದೀನದಯಾಳರು ಅಟಲ್ ಅಡ್ವಾಣಿ ಇಂತಹ ಶ್ರೇಷ್ಠರಿಂದ....*

ತಾನು ಇಷ್ಟ ಪಟ್ಟ ಹುಡುಗಿ ಮದುವೆಗಿಂತ ಮುಂಚೆ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಾಗಲೂ ಆಕೆಗೆ ಧೈರ್ಯ ತುಂಬಿ ಆಕೆಯನ್ನೇ *ಮದುವೆ ಆಗಿ ...*
ಪ್ರೀತಿ ಮತ್ತು ತ್ಯಾಗಕ್ಕೆ ಅರ್ಥ ಕೊಟ್ಟ ಪ್ರತಾಪ್ ಸಿಂಹ ನಂತ ಶ್ರೇಷ್ಠ ಮಾನವತಾವಾದಿ ಬಗ್ಗೆ ನಮಗೆ ಹೆಮ್ಮೆ ಇದೆ....

ನನಗಂತೂ ಪ್ರತಾಪ್ ಸಿಂಹರ ಜಾತಿ ಕುಲ ಗೋತ್ರ ಏನು ಗೊತ್ತಿಲ್ಲ.... ಆತನ *ದೇಶಭಕ್ತಿಯ ಮೇಲೆ ನನಗೆ ಅಪಾರ ಅಭಿಮಾನ ಇದೆ....* ಆತನ ಪರ ನಿಲ್ಲುವುದಕ್ಕೆ ನನಗೆ ಹೆಮ್ಮೆ ಇದೆ...

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...