Skip to main content

ಅಂಬೇಡ್ಕರ್‌ ಸೋಲಿಸಲು ಹೊರಟಾಗ ನೆಹರು ಜತೆ ಇದ್ದವರಾರು? ✍ ಪ್ರತಾಪ್ ಸಿಂಹ



ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ ಹೊರಟೆಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್ ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ನೊಗವನ್ನು ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬೈಗುಳಗಳ ಸುರಿಮಳೆಗೈದ ಚಾಲಕ, ನಿಂದಿಸಿ ಹಿಂತಿರುಗಿ ಹೊರಟುಹೋದ. ಇತ್ತ ಮಾರ್ಗ ಮಧ್ಯದಲ್ಲಿ ದಿಕ್ಕು ತೋಚದಂತಾದ ಬಾಲಕರು ಬಾಯಾರಿಕೆಯಿಂದ ಬಳಲಲಾರಂಭಿಸಿದರು. ಆದರೆ ಬೇಡಿ- ಕೊಂಡರೂ ಬೊಗಸೆ ನೀರು ಸಿಗಲಿಲ್ಲ. ಬಾಯಾರಿಕೆಯನ್ನು ತಾಳಲಾರದೆ ಬಾವಿಯ ಬಳಿಗೆ ಹೋದ ಕಿರಿಯ ಸಹೋದರ ದಾಹವನ್ನು ಆರಿಸಿಕೊಂಡ. ಅದನ್ನು ಗಮನಿಸಿದ ಮೇಲ್ಜಾತಿಯವರು ಮನುಷ್ಯತ್ವವನ್ನೇ ಕಳೆದುಕೊಂಡು ಆತನನ್ನು ದಂಡಿಸಿದರು. ಹೇರ್ ಕಟ್ ಮಾಡಿಸಿಕೊಳ್ಳಲು ಹೋದರೆ ಕ್ಷೌರಿಕನಿಂದಲೂ ತಿರಸ್ಕಾರ. ಶಾಲೆಗೆ ತೆರಳುತ್ತಿರುವಾಗ ಜೋರಾಗಿ ಮಳೆ ಬಂದ ಕಾರಣ ಬದಿಯಲ್ಲೇ ಇದ್ದ ಮನೆಯ ಗೋಡೆಯ ಬಳಿ ನಿಂತಾಗ ಅದನ್ನು ಗಮನಿಸಿದ ಮನೆಯಾಕೆ ಕೋಪದಿಂದ ಕೊಚ್ಚೆಗೆ ತಳ್ಳಿದಳು.
ಅದೇ ಬಾಲಕ ಮುಂದೆ ಅಮೆರಿಕಕ್ಕೆ ಹೋಗಿ ಸ್ನಾತಕೋತ್ತರ ಪದವಿ ಪಡೆದುಕೊಂಡು 1917ರಲ್ಲಿ ಭಾರತಕ್ಕೆ ಆಗಮಿಸಿದಾಗ ಬರೋಡಾದ ಮಹಾರಾಜರು ಸೇನಾ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಒಬ್ಬಂಟಿಯಾಗಿದ್ದ ಅವರು ಲಾಡ್ಜ್ ವೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಅದು ಪಾರ್ಸಿಗಳ ವಠಾರವಾಗಿತ್ತು. ಅವರಿಗೆ ಬಾಡಿಗೆಗೆ ಬಂದ ಜಾತಿಯ ಬಗ್ಗೆ ಅನುಮಾನ ಶುರುವಾಯಿತು. ಅಡ್ಡಹಾಕಿ ‘ಯಾರು ನೀನು?’ ಎಂದು ಪ್ರಶ್ನಿಸಿದರು. ‘ನಾನೊಬ್ಬ ಹಿಂದು’ ಎಂದು ಉತ್ತರಿಸಿದಾಗ, ‘ಯಾವ ಜಾತಿಯವನು ಹೇಳು?’ ಎಂಬ ಗದರಿಕೆ. ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಗೊತ್ತಾದ ಕೂಡಲೇ ಮನೆಯಿಂದಲೇ ಹೊರಹಾಕಿದರು. ಕಚೇರಿಗೆ ಹೋದರೆ ಅವರಿಗಿಂತ ತೀರಾ ಕೆಳದರ್ಜೆಯ ನೌಕರನಿಂದಲೂ ತಿರಸ್ಕಾರ. ಹತ್ತಿರಕ್ಕೆ ಬಂದರೆ ಮೈಲಿಗೆಯಾಗುತ್ತದೆ ಎಂಬ ಕಾರಣಕ್ಕೆ ಕಡತಗಳನ್ನು ಮೇಜಿನ ಮೇಲೆ ಎಸೆದು ಹೋಗುತ್ತಿದ್ದ!

***
ಡಾ. ಬಿ.ಆರ್. ಅಂಬೇಡ್ಕರ್ ಬದುಕಿನ ತಿರುವಿ ಹಾಕುತ್ತಾ ಹೋದರೆ ಇಂತಹ ನೂರಾರು ಘಟನೆಗಳನ್ನು ಕಾಣಬಹುದು. ಆದರೆ ಸಂಸ್ಕೃತಕ್ಕೆ ಹೋಲಿಸಿದರೆ ಪರ್ಷಿಯನ್ ಏನೇನೂ ಅಲ್ಲ. ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ತಿಳಿಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ’ ಎಂದಿದ್ದು, ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕು’ ಎಂದು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿದ್ದು ಮಡಿವಂತರಿಂದ ದೌರ್ಜನ್ಯಕ್ಕೊಳಗಾದ ಅಂಬೇಡ್ಕರ್ ಅವರೇ ಎಂದರೆ ನಂಬುತ್ತೀರಾ?

ಅದರ ಹಿಂದೆಯೂ ಒಂದು ಕಥೆಯಿದೆ, ಕಾರಣವೂ ಇದೆ. 1928ರಲ್ಲಿ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಆಯ್ಕೆಯಾಗಿ ಬಂದ ಅಂಬೇಡ್ಕರ್, ದಲಿತರಿಗೆ ದೇವಾಲಯ ದೊರಕಿಸಿಕೊಡಲು ಬಹಳ ಕಾಲದಿಂದಲೂ ಹೋರಾಡುತ್ತಿದ್ದರು. ಆ ಹೊತ್ತಿನಲ್ಲಿಯೇ ಕೆಲ ಮೇಲ್ವರ್ಗದವರು ಮಹಾತ್ಮ ಗಾಂಧೀಜಿಯವರ ಕರೆಯನ್ನು ಧಿಕ್ಕರಿಸಿ ನಾಸಿಕ್‌ನ ಕೇಲಾರಾಮ್ ದೇವಾಲಯಕ್ಕೆ ದಲಿತರು ಪ್ರವೇಶ ಮಾಡುವುದಕ್ಕೆ ಅಡ್ಡಿಪಡಿಸಿದರು. ಆಗ ಅಂಬೇಡ್ಕರ್ ಅವರೇ ದೇವಾಲಯ ಪ್ರವೇಶ ಚಳವಳಿಯ ನೇತೃತ್ವ ವಹಿಸಿಕೊಂಡರು. ಆದರೆ ದಲಿತರು ದೇವಾಲಯ ಪ್ರವೇಶ ಮಾಡುವುದಕ್ಕೆ ಶಾಸ್ತ್ರಗಳು ಅಡ್ಡಿಬರುತ್ತವೆ ಎಂದು ಮೇಲ್ವರ್ಗದವರು ಪ್ರತಿಪಾದಿಸುತ್ತಿದ್ದರು. ಹಾಗಾಗಿ ತಾವು ಹಿಂದೂ ಆಗಿದ್ದರೂ ದೇವಾಲಯದೊಳಕ್ಕೆ ಹೋಗಲು ಬಾಧಕವೇನು ಎಂಬುದನ್ನು ತಿಳಿಯಲು ಅಂಬೇಡ್ಕರ್ ಮುಂದಾದರು. ಸ್ವತಃ ಓದಿ ಮೂಲದಿಂದಲೇ ತಿಳಿಯುವ ಮನಸು ಮಾಡಿದರು. ಅದಕ್ಕಾಗಿ ಸಂಸ್ಕೃತವನ್ನು ಕರಗತ ಮಾಡಿಕೊಳ್ಳಲು ನಿಶ್ಚಯಿಸಿ ತಕ್ಕ ಗುರುವಿನ ಅನ್ವೇಷಣೆಯಲ್ಲಿ ತೊಡಗಿದರು.

ಇತ್ತ ಹೊಸಕೆರೆ ಪಂಡಿತ ನಾಗಪ್ಪ ಶಾಸ್ತ್ರಿಯವರು ನಮ್ಮ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಪ್ಲೀಡರ್ (ಲಾಯರ್) ಆಗಿದ್ದರು. ಸಂಸ್ಕೃತದಲ್ಲಿ ಅಸಾಧಾರಣ ಪಾಂಡಿತ್ಯ ಸಾಧಿಸಿದ್ದ ಅವರು ಪ್ಲೀಡರ್ ಪರೀಕ್ಷೆಗಾಗಿ ಓದುತ್ತಿದ್ದಾಗಲೇ ಮೈಸೂರು ಅರಮನೆಯಲ್ಲಿ ರಾಜಕುಮಾರ, ಕುಮಾರಿಯರಿಗೆ ಪಾಠ ಹೇಳಿದ್ದಂಥ ವ್ಯಕ್ತಿ. 1905ರಲ್ಲೇ ಪಂಡಿತ ಹಾಗೂ ಶಾಸ್ತ್ರಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದರು. ಪ್ಲೀಡರ್ ಪರೀಕ್ಷೆಯ ನಂತರ ಹಿಂತಿರುಗಿದ ಅವರು ಲಾಯರ್ ಗಿರಿ ಆರಂಭಿಸಿದರು. ಜತೆಗೆ ಸಂಸ್ಕೃತ ಅಭ್ಯಾಸವೂ ನಿರಂತರವಾಗಿತ್ತು. ಶಾಸ್ತ್ರಿಗಳಿಗೆ ಆರು ಹೆಣ್ಣು ಹಾಗೂ ನಾಲ್ಕು ಗಂಡು ಮಕ್ಕಳು. ಗೌತಮಬುದ್ಧನ ವಿಚಾರಧಾರೆಯನ್ನು ಮೆಚ್ಚಿದ ಈ ಮಡಿವಂತ, ಸಂಸ್ಕೃತದಲ್ಲಿ ಬುದ್ಧ ಭಾಗವತ’ ಬರೆಯಲು ಮುಂದಾಗಿದ್ದರು.

ಇತ್ತ 1929ರಲ್ಲಿ ಕರ್ನಾಟಕಕ್ಕೆ ಆಗಮಿಸಿದ ಮದನಮೋಹನ ಮಾಳವೀಯ ಹಾಗೂ ನಾಗಪ್ಪ ಶಾಸ್ತ್ರಿಯವರು ಚಿಕ್ಕಮಗಳೂರಿನಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಪರಸ್ಪರ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತು. ಶಾಸ್ತ್ರಿಗಳು ಬರೆಯುತ್ತಿದ್ದ ‘ಬುದ್ಧ ಭಾಗವತ’ದ ಹಸ್ತಪ್ರತಿಗಳನ್ನು ಮಾಳವೀಯ ಬೆಚ್ಚಿ ಬೆರಗಾದರು. ಮುಂಬೈಗೆ ಬರುವಂತೆ ಶಾಸ್ತ್ರಿಗಳಿಗೆ ಆಹ್ವಾನ ನೀಡಿದರು. ಲಾಯರ್‌ಗಿರಿಯೂ ಸರಿಯಾಗಿ ನಡೆಯದ ಕಾಲವದು. ಜತೆಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಸೋತಿದ್ದ ಶಾಸ್ತ್ರಿಗಳು ಸಂಸಾರವನ್ನು ಊರಲ್ಲಿ ಬಿಟ್ಟು 1929, ಅಕ್ಟೋಬರ್‌ನಲ್ಲಿ ಮುಂಬೈಗೆ ತೆರಳಿದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಪ್ರಾರ್ಥನಾ ಸಭೆಯೊಂದರ ವೇಳೆ ಮಾಳವೀಯರು ನಾಗಪ್ಪ ಶಾಸ್ತ್ರಿಯವರನ್ನು ಗಾಂಧೀಜಿಯವರಿಗೆ ಪರಿಚಯ ಮಾಡಿಕೊಟ್ಟರು. ಗಾಂಧೀಜಿಯವರು ಅಲ್ಲಿಯೇ ಇದ್ದ ಅಂಬೇಡ್ಕರ್ ಅವರನ್ನು ಕರೆದು ‘ತುಮ್ಹೆಗುರು ಕಾ ತಲಾಶ್ ಥಾ ಆಗಯಾ ದೇಖೋ ತುಮ್ಹಾರಾ ಗುರು’ ಎಂದು ನಗೆಯಾಡಿದರು.

ಹೀಗೆ 1930ರಲ್ಲಿ ನಾಗಪ್ಪ ಶಾಸ್ತ್ರಿಗಳಿಂದ ಅಂಬೇಡ್ಕರ್ ಅವರಿಗೆ ಸಂಸ್ಕೃತಪಾಠ ಆರಂಭವಾಯಿತು. ವಾರಕ್ಕೆ ಮೂರು ದಿನ ಪಾಠ, ಮುಂದಿನ ಪಾಠಕ್ಕೆ ಹೋದೊಡನೆಯೇ ಹಿಂದಿನ ಪಾಠದ ಬಗ್ಗೆ ಅಂಬೇಡ್ಕರ್ ಅವರಿಂದ ಪ್ರಶ್ನೆಗಳ ಪಟ್ಟಿಯೇ ಸಿದ್ಧವಾಗಿರುತ್ತಿತ್ತು. ಅದಕ್ಕೆ ಉತ್ತರ ಹೇಳಿದ ಮಾತ್ರಕ್ಕೆ ಅ ಪ್ರಶ್ನೆ ಮತ್ತೆ ಬರುವುದಿಲ್ಲವೆಂಬ ಬಗ್ಗೆ ಯಾವ ಖಾತ್ರಿಯೂ ಇರಲಿಲ್ಲ. ಅಂಬೇಡ್ಕರ್ ತಮ್ಮ ಮನದಲ್ಲಿ ಮೂಡಿದ ಸಂಶಯಗಳನ್ನೆಲ್ಲ ಮುಂದಿಟ್ಟು ಚರ್ಚಿಸುತ್ತಿದ್ದರು. ಹೀಗೆ ವರ್ಷಗಳ ಕಾಲ ನಾಗಪ್ಪ ಶಾಸ್ತ್ರಿಗಳ ಬಳಿ ಸಂಸ್ಕೃತ ಕಲಿತ ಅಂಬೇಡ್ಕರ್ ಏಳು ವರ್ಷಗಳಲ್ಲಿ ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದರು.

ಜನ್ಮನಾ ಜಾಯತೇ ಶೂದ್ರಃ
ಸಂಸ್ಕಾರಾತ್ ದ್ವಿಜ ಉಚ್ಯತೇ’

ಅಂದರೆ ಹುಟ್ಟುವಾಗ ಎಲ್ಲರೂ ಶೂದ್ರರೇ. ಆದರೆ ಸಂಸ್ಕಾರದಿಂದ ಉಚ್ಚರಾಗಬಹುದು ಎಂಬ ಮಾತಿದೆ.  ವಸಿಷ್ಠ, ಪರಾಶರ, ಕೃಷ್ಣ, ದ್ವೈಪಾಯನ(ವ್ಯಾಸ), ಕಪಿಲ, ದರ್ವತಿ (ಮಾತಂಗಿ), ಸತ್ಯಕಾಮ ಜಾಬಾಲಿ, ವಾಲ್ಮೀಕಿ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳ ಮೂಲವನ್ನು ಹುಡುಕಿಕೊಂಡು ಹೋದರೆ ಅವರ್ಯಾರೂ ಬ್ರಾಹ್ಮಣರಲ್ಲ. ಡಾಕ್ಟರ್ ಮಕ್ಕಳು ಡಾಕ್ಟರ್ ಆಗಬೇಕು, ಎಂಜಿನಿಯರ್ ಮಕ್ಕಳು ಎಂಜಿನಿಯರ್‌ಗಳೇ ಆಗಬೇಕು ಎಂದು ಹೇಗೆ ಇಲ್ಲವೋ ಅದೇ ರೀತಿ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣನಾಗುವುದೂ ಇಲ್ಲ. ಆದರೆ ಬ್ರಾಹ್ಮಣನ ಮಗನಾಗಿ ಹುಟ್ಟುವುದರಿಂದ ಜ್ಞಾನ, ಸಭ್ಯ ನಡತೆಗಳಂತಹ ವಿಚಾರಗಳನ್ನು ಸಹಜವಾಗಿಯೇ ಪಡೆದುಕೊಳ್ಳುವ ಅನುಕೂಲವಿರುತ್ತದೆ. ಆದರೂ ಬ್ರಾಹ್ಮಣನಾಗಬೇಕಾದರೆ ಸ್ವತಃ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಹಾಗೆ ಜ್ಞಾನ ಸಂಪಾದನೆ ಮಾಡಿಕೊಂಡಾಗ ಆತನಿಗೆ ಮರುಹುಟ್ಟು ಲಭಿಸುತ್ತದೆ, ದ್ವಿಜನಾಗುತ್ತಾನೆ.

ಮಹರ್ಷಿ ಅರವಿಂದ್, ಪಂಡಿತ್ ಶ್ಯಾಮ್ಜಿ ಕೃಷ್ಣವರ್ಮ (ಪಂಡಿತ ಪದವಿ ಮೊದಲ ಬ್ರಾಹ್ಮಣೀತರ), ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಲಾಲ್ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಕೆ.ಕೆ. ಮುನ್ಷಿ ಇವರ್ಯಾರೂ ಬ್ರಾಹ್ಮಣರಲ್ಲ, ಕಲಿತು ಶ್ರೇಷ್ಠರೆನಿಸಿಕೊಂಡವರು.

ಅಂಬೇಡ್ಕರ್ ಕೂಡ ಅದೇ ಸಾಲಿಗೆ ಸೇರುತ್ತಾರೆ. ಅರ್ಧ ವಯಸ್ಸು ಕಳೆದ ಮೇಲೆ ಸಂಸ್ಕೃತ ಅಧ್ಯಯನ ಮಾಡಿ ಪಾಂಡಿತ್ಯ ಸಾಧಿಸಿದರು. ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿ, ವಿಶ್ಲೇಷಿಸುವ ಸಾಮರ್ಥ್ಯ ಪಡೆದರು. ಅದರ ಫಲವೇ ’Riddles in Hinduism’ ಪುಸ್ತಕ. ವೇದಗಳ ಕಾಲದಲ್ಲಿ ಜಾತಿ ಪದ್ಧತಿಯಿರಲಿಲ್ಲ. ಇರಲಿಲ್ಲ. ಹಾಗಾದರೆ ಜಾತಿ ವ್ಯವಸ್ಥೆ ಹಿಂದೂ ಸಮಾಜದಲ್ಲಿ ಹೇಗೆ ಸೇರಿಕೊಂಡಿತು? ಮುಂತಾದ 24 ಒಗಟುಗಳನ್ನು ಪಟ್ಟಿ ಮಾಡಿರುವ ಅಂಬೇಡ್ಕರ್, ನಮ್ಮ ಪಂಡಿತ-ಪಾಮರ ವರ್ಗದ ವಂಚನೆಗಳನ್ನು ಈ ಪುಸ್ತಕದಲ್ಲಿ ಬಯಲುಗೊಳಿಸಿದರು. ಹಾಗಂತ?

ಅವರು ಯಾರ ಮೇಲೂ ದ್ವೇಷ ಕಾರಲಿಲ್ಲ. ಸಂಸ್ಕೃತವನ್ನೇ ಅಧಿಕೃತ ಭಾಷೆಯಾಗಿ ಸ್ವಿಕರಿಸುವಂತೆ’ 1949, ಸೆಪ್ಟೆಂಬರ್ 10ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮುಂದಿಟ್ಟಿದ್ದು ಅಂಬೇಡ್ಕರ್ ಅವರೇ. ಅಂಬೇಡ್ಕರ್ ಎಂದರೆ ಹಿಂದೂ ಧರ್ಮದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು. ಸ್ವಾತಂತ್ರ ಹೋರಾಟಕ್ಕೆ ಅವರ ಕೊಡುಗೆ ಅಷ್ಟಿಲ್ಲವಾದರೂ ದೇಶ ವಿಭಜನೆ ಅನಿವಾರ್ಯವಾದಾಗ ಭೂಭಾಗವನ್ನು ಹಂಚಿಕೊಳ್ಳುವ ಜತೆಗೆ ಪಾಪುಲೇಷನ್ ಎಕ್ಸ್ಚೇಂಜ್’ (ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಹಿಂದುಗಳನ್ನು ಭಾರತಕ್ಕೆ ಕರೆಸಿಕೊಳ್ಳಿ) ಕೂಡ ಮಾಡಿಕೊಳ್ಳಿ, ಹಿಂದು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ, ಮುಸಲ್ಮಾನರ ವಿಶ್ವಭ್ರಾತೃತ್ವವೆನ್ನುವುದು ಇಸ್ಲಾಮಿಕ್ ಬ್ರದರ್ ಹುಡ್ಡೇ ಹೊರತು, ಯೂನಿವರ್ಸಲ್ ಬ್ರದರ್‌ಹುಡ್ ಎಂಬ ಕಟುಸತ್ಯವನ್ನು ದಿಟ್ಟವಾಗಿ ಹೇಳಿದವರು ಅವರು ಮಾತ್ರ! ಅವರ ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕವನ್ನು ಓದಿದರೆ ನಿಮಗೆ ಇದೆಲ್ಲ ಅರ್ಥವಾಗುತ್ತದೆ!

ನೀವು ಬಾಳಾಸಾಹೇಬ್ ಗಂಗಾಧರ್ ಖೇರ್ ಅಥವಾ ಬಿ.ಜಿ. ಖೇರ್ ಹೆಸರು ಕೇಳಿದ್ದೀರಾ? ಅವರು ಈಗ ಮಹಾರಾಷ್ಟ್ರವಾಗಿರುವ ಅಂದಿನ ಬಾಂಬೆ ರಾಜ್ಯದ (ಮಹಾರಾಷ್ಟ್ರಗುಜರಾತ್) ಮೊದಲ ಮುಖ್ಯಮಂತ್ರಿ. ಮುಂಬೈನಲ್ಲೊಂದು ಸಾರ್ವಜನಿಕ ಸಭೆ ಆಯೋಜನೆಯಾಗಿತ್ತು. ಪಂಡಿತ್ ನೆಹರು, ಮೊರಾರ್ಜಿ ದೇಸಾಯಿ ಅವರಂಥ ಗಣ್ಯರು ಉಪಸ್ಥಿತರಿದ್ದರು. ಮಾತಿಗೆ ನಿಂತ ಬಿ.ಜಿ. ಖೇರ್ ಭಾಷಣದ ಮಧ್ಯೆ I am an Indian first and a Maharashtrian next ನಾನು ಮೊದಲು ಭಾರತೀಯ, ನಂತರ ಮಹಾರಾಷ್ಟ್ರಿಗ’ ಎಂದುಬಿಟ್ಟರು. ತಮ್ಮ ಸರದಿ ಬಂದಾಗ ಬಿ.ಜಿ. ಖೇರ್ ಅವರ ಮಾತನ್ನು ದೃಷ್ಟಿಯಲ್ಲಿಟ್ಟುಕೊಂಡು, I am an Indian first and  Indian last ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ’ ಎಂದರು ಡಾ. ಅಂಬೇಡ್ಕರ್!

ಅಷ್ಟೇ ಅಲ್ಲ….
ಭಾರತದೊಂದಿಗೆ 1947, ಅಕ್ಟೋಬರ್ 25ರಂದು ಮಹಾರಾಜ ಹರಿಸಿಂಗ್ ಸಹಿ ಹಾಕುವುದರೊಂದಿಗೆ ಒಕ್ಕೂಟದೊಳಗೆ ಸೇರ್ಪಡೆಯಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಗಿನ ಕಾನೂನು ಸಚಿವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಖಡಾಖಂಡಿತವಾಗಿ ವಿರೋಧಿಸಿದ್ದರು. ಎಲ್ಲ ರಾಜ್ಯಗಳೂ ಸಮಾನ ಹಾಗೂ ಸಮಾನ ಹಕ್ಕುಅವಕಾಶಗಳನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಹೀಗೆ ಅಂಬೇಡ್ಕರ್ ನಮಗೆ ಬಗ್ಗುವುದಿಲ್ಲ ಎಂದು ತಿಳಿದ ನೆಹರು ನರಿ ಉಪಾಯ ಮಾಡಿದರು.

ಅನಾರೋಗ್ಯ’ದ ಕಾರಣ ಮರುದಿನ ಅಂಬೇಡ್ಕರ್ ಸದನಕ್ಕೆ ಬರಲೇ ಇಲ್ಲ, ಅವರ ಅನುಪಸ್ಥಿತಿಯಲ್ಲಿ 370 ಅನುಮೋದನೆ ದೊರೆತು ಸಂವಿಧಾನ ಸೇರಿತು. ಈ ಘಟನೆ ನಡೆದ ಮಾರನೇ ದಿನವೇ ಸದನಕ್ಕೆ ಆಗಮಿಸಿದ ಅಂಬೇಡ್ಕರರನ್ನು ಕಾರಣ ಕೇಳಿದಾಗ ಬರಬೇಡ’ ಎಂದು ನೆಹರು ಅವರೇ ಹೇಳಿದ್ದರು ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ನೆಹರು ಬಣ್ಣ ಬಯಲಾಯಿತು, ಕಾಶ್ಮೀರ ಶಾಶ್ವತವಾಗಿ ಭಾರತಕ್ಕೆ ಮಗ್ಗುಲ ಮುಳ್ಳಾಯಿತು, ದೇಶದ್ರೋಹಿಗಳ ನೆಲೆವೀಡಾಯಿತು. ಇದೆಲ್ಲವೂ ಸಂವಿಧಾನದ ಕರಡು ಸಮಿತಿಯ ಚರ್ಚೆಗಳಲ್ಲಿ ದಾಖಲಾಗಿವೆ.

ಇಂತಹ ಮಹಾನ್ ವ್ಯಕ್ತಿಗೆ, ಅವರ ನೇರ ನಡೆ ನುಡಿಗೆ ಗಾಂಧೀಜಿ ಹಾಗೂ ಸರ್ದಾರ್ ಮರಣಾನಂತರ ಕಾಂಗ್ರೆಸ್ , ಅದರಲ್ಲೂ ಮೊದಲ ಪ್ರಧಾನಿ ನೆಹರು ಮಹಾಶಯರು ಕೊಟ್ಟ ಬಳುವಳಿಯೇನು ಗೊತ್ತೆ? ಹಿಂದೂ ಕೋಡ್ ಬಿಲ್ ತರುವ ವೇಳೆಯಲ್ಲಿ ಹೆಣ್ಣುಮಕ್ಕಳಿಗೂ ಆಸ್ತಿ ಹಕ್ಕು ಕೊಡಬೇಕು, ಹಿಂದೂ’ ಎಂಬ ಹೆಮ್ಮರದಡಿ ಮುಸ್ಲಿಂ, ಕ್ರೈಸ್ತ, ಪಾರ್ಸಿಗಳನ್ನು ಹೊರತುಪಡಿಸಿ ಎಲ್ಲರೂ ಇರಬೇಕೆಂಬ ಕಾನೂನು ಸಚಿವ ಅಂಬೇಡ್ಕರ್ ಪ್ರತಿಪಾದನೆಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ ಅವರ ವಿಧೇಯಕ ಅಸೆಂಬ್ಲಿಯಲ್ಲಿ ಸೋಲುವಂತೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು ನೆಹರು!  ಅಷ್ಟು ಮಾತ್ರವಲ್ಲ,

ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಮುಂಬ್ಯೆ ಉತ್ತರದಿಂದ ಸ್ಪರ್ಧಿಸಿದಾಗ ಅವರ ಸಹಾಯಕನನ್ನೇ ಕಣಕ್ಕಿಳಿಸಿದ ಕಾಂಗ್ರೆಸ್ ಅಂಬೇಡ್ಕರರನ್ನು ಸೋಲಿಸಿ ಅವಮಾನಿಸಿತು! 1954ರಲ್ಲಿ ಮುಂಬ್ಯೆ ಭಂಡಾರದಲ್ಲಿ ಉಪಚುನಾವಣೆ ಏರ್ಪಟ್ಟಾಗ ಅಂಬೇಡ್ಕರ್ ಮತ್ತೆ ಸ್ಪರ್ಧಿಸಿದರು. ಆಗಲೂ ಕಾಂಗ್ರೆಸ್ ಅಂಬೇಡ್ಕರರನ್ನು ಸೋಲಿಸಿತು. ಆದರೆ ಕುತೂಹಲಕಾರಿ ಸಂಗತಿಯೇನೆಂದು ಗೊತ್ತಾ? ಆಗ ಅಂಬೇಡ್ಕರ್ ಅವರ ಚುನಾವಣಾ ಏಜೆಂಟ್ ಆಗಿದ್ದ ವ್ಯಕ್ತಿ ತಥಾಕಥಿಕ ವಿರೋಧಿಗಳು ಯಾರನ್ನು ಸಂಘಗಳು ಎಂದು ಆಚಾರವಿಲ್ಲದೆ ಮಾತನಾಡುತ್ತಾರೋ ಅಂಥ ಸಂಘದ ಸ್ವಯಂಸೇವಕ ದತ್ತೋಪಂತ ಠೇಂಗಡಿ!

ಅಂಬೇಡ್ಕರ್ ಪ್ರೀತಿ’ಗೆ ಇನ್ನೂ ಉದಾಹರಣೆ ಬೇಕಾ? 1955ರಲ್ಲಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೆಹರು ಅವರಿಗಾಗಲಿ, 1971ರಲ್ಲಿ ಅದೇ ಕೆಲಸ ಮಾಡಿಕೊಂಡ ಇಂದಿರಾ ಗಾಂಧಿಯವರಿಗಾಗಲಿ ಡಾ. ಅಂಬೇಡ್ಕರ್‌ಗೆ ಭಾರತ ರತ್ನ ಕೊಡಬೇಕು ಅಂತ ಎಂದೂ ಅನಿಸಲಿಲ್ಲ! ಅಂಬೇಡ್ಕರ್‌ಗೆ 1990ರಲ್ಲಿ ಭಾರತ ರತ್ನ ಕೊಡಲು ವಿ.ಪಿ. ಸಿಂಗ್ ಬಿಜೆಪಿ ಸರಕಾರವೇ ಬರಬೇಕಾಯಿತು! ಪಾರ್ಲಿಮೆಂಟಿನ ಸೆಂಟ್ರಲ್ ಹಾಲಿನಲ್ಲಿ ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡಿದ್ದೂ ಬಿಜೆಪಿ ಬೆಂಬಲಿತ ಸರಕಾರವೇ. ಉನ್ನತ ವ್ಯಾಸಂಗಕ್ಕೆಂದು ಹೋಗಿದ್ದಾಗ ಅಂಬೇಡ್ಕರ್ ತಂಗಿದ್ದ ಲಂಡನ್ನಿನ ಕಿಂಗ್ ಹೆನ್ರಿ ರಸ್ತೆಯಲ್ಲಿರುವ ಮನೆ ಮಾರಾಟಕ್ಕೆ ಬಂದರೂ 10 ವರ್ಷಗಳ ಯುಪಿಎ ಆಡಳಿತವಾಗಲಿ, ಮಹಾರಾಷ್ಟ್ರದ ಕಾಂಗ್ರೆಸ್‌ಗೆ ಸರಕಾರವಾಗಲಿ ಖರೀದಿಸುವ ಮನಸ್ಸು ಮಾಡಲಿಲ್ಲ! ಅದನ್ನೂ 32 ಕೋಟಿ ರೂ. ಕೊಟ್ಟು ಖರೀದಿಸಲು ಬಿಜೆಪಿಯ ದೇವೇಂದ್ರ ಫಡ್ನವೀಸ್ ಬರಬೇಕಾಯಿತು!

ಇಂದು ಅಂಬೇಡ್ಕರ್ ಅವರ 127ನೇ ಜನ್ಮದಿನ. ಇಂತಹ ಪುಣ್ಯದಿನವನ್ನು ರಾಷ್ಟ್ರಾದ್ಯಂತ ಆಚರಿಸಲು, ಅಂಬೇಡ್ಕರ್ ಕೊಡುಗೆಯನ್ನು ಜಗತ್ತಿಗೆ ಸಾರಲು ನರೇಂದ್ರ ಮೋದಿ ಬಂದಿದ್ದಾರೆ. ಇದೇನೇ ಇರಲಿ, ಫುಲೆ, ಶಾಹು ಮಹಾರಾಜ್, ಅಗರ್ಕರ್ ಮುಂತಾದವರು ದಲಿತರ ವೇದನೆಯನ್ನು, ಅವರಿಗಾಗುತ್ತಿದ್ದ ಅವಮಾನವನ್ನು ಅರ್ಥಮಾಡಿಕೊಂಡು ಕೆಲಸ ಮಾಡಿದ್ದಿದೆ. ಆದರೆ ಸಾಮಾಜಿಕ ಪರಿವರ್ತನೆಯ ಯಾತ್ರೆಯಲ್ಲಿ ಅಂಬೇಡ್ಕರ್ ಏಕಮೇವಾದ್ವಿತೀಯರಾಗಿ ಕಾಣಬರುತ್ತಾರೆ.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

Computers

First Generation of Computers (1942-1955) : The beginning of commercial computer age is from UNIVAC (Universal Automatic Computer). It was developed by two scientists Mauchly and Echert at the Census Department of United States in 1947. The first generation computers were used during 1942-1955. They were based on vacuum tubes. Examples of first generation computers are ENIVAC and UNIVAC-1. Advantages Vacuum tubes were the only electronic component available during those days.Vacuum tube technology made possible to make electronic digital computers.These computers could calculate data in millisecond. Disadvantages The computers were very large in size.They consumed a large amount of energy.They heated very soon due to thousands of vacuum tubes.They were not very reliable.Air conditioning was required.Constant maintenance was required.Non-portable.Costly commercial production.Limited commercial use.Very slow speed.Limited programming capabilities.Used machine language only.Used...